ಕರ್ನಾಟಕ

karnataka

ETV Bharat / state

ಒಳ ಮೀಸಲಾತಿಗೆ ಅನುವು ಮಾಡುವಂತೆ ಒತ್ತಾಯಿಸಿ ಡಿಎಸ್ಎಸ್ ಪ್ರತಿಭಟನೆ - ಪ್ರತಿಭಟನಾ ಮೆರವಣಿಗೆ

ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಿಸಿ ವೃತ್ತಕ್ಕೆ ತಲುಪಿ, ಬಳಿಕ ಮಾನವ ಸರಪಳಿ ನಿರ್ಮಿಸಿ ವರದಿ ಮಂಡಿಸಲು ತಡ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

dss
dss

By

Published : Sep 22, 2020, 5:02 PM IST

Updated : Sep 22, 2020, 5:27 PM IST

ಚಿತ್ರದುರ್ಗ: ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಮಂಡಿಸಿ ಒಳ ಮೀಸಲಾತಿಗೆ ಅನುವು ಮಾಡಿಕೊಡಬೇಕೆಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟಿಸಲಾಯಿತು‌.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಬಳಿ ಸೇರಿದ ಡಿಎಸ್ಎಸ್ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಡಿಎಸ್ಎಸ್ ಪ್ರತಿಭಟನೆ

ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಿಸಿ ವೃತ್ತಕ್ಕೆ ತಲುಪಿ ಬಳಿಕ ಮಾನವ ಸರಪಳಿ ನಿರ್ಮಿಸಿ ವರದಿ ಮಂಡಿಸಲು ತಡ ಮಾಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಬಗ್ಗೆ ನಿರ್ದೇಶನ ನೀಡಿ ಅಭಿಪ್ರಾಯ ವ್ಯಕ್ತಪಡಿಸಿದರೂ ಕೂಡ ರಾಜ್ಯ ಸರ್ಕಾರ ವರದಿ ಮಂಡಿಸಲು ತಡಮಾಡುತ್ತಿರುವ ಬೆನ್ನಲ್ಲೇ ಆಕ್ರೋಶ ಹೊರಹಾಕಲಾಯಿತು. ಬಳಿಕ ವರದಿ ಮಂಡಿಸುವಂತೆ ಅಪರ ಜಿಲ್ಲಾಧಿಕಾರಿ ಸಂಗಪ್ಪನವರ ಮುಖೇನ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.

Last Updated : Sep 22, 2020, 5:27 PM IST

ABOUT THE AUTHOR

...view details