ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ನಿವೃತ್ತ ಡಿವೈಎಸ್ಪಿ ಕವಳಪ್ಪ ಅವರಿಂದ ಚಾಲನೆ ದೊರೆತಿದ್ದು, ಶೋಭಾಯಾತ್ರೆಗೆ ಜನಸಾಗರ ಹರಿದು ಬರುತ್ತಿದೆ.
ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಚಾಲನೆ: ಗಣಪತಿ ಭಗವಾಧ್ವಜ 1.5 ಲಕ್ಷಕ್ಕೆ ಹರಾಜು ಶೋಭಾಯಾತ್ರೆಯಲ್ಲಿ ಶ್ರೀರಾಮ, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣನ ಸ್ತಬ್ಧ ಚಿತ್ರ ಪ್ರದರ್ಶನ ಕೂಡ ಏರ್ಪಡಿಸಲಾಗಿದ್ದು, ಗಣೇಶ ಭಕ್ತರು ಮನಸೋತಿದ್ದಾರೆ. ಇದೇ ವೇಳೆ, ಗಣಪತಿಯ ಭಗವಾಧ್ವಜ ಮತ್ತು ಹಾರ ಹರಾಜು ಪ್ರಕ್ರಿಯೆ ಕೂಡ ನಡೆದಿದೆ.
ಹರಾಜಿನಲ್ಲಿ ಗಣಪತಿ ಭಗವಾಧ್ವಜ 1.5 ಲಕ್ಷಕ್ಕೆ ಹರಾಜಾಗಿದ್ದು, 1.5ಲಕ್ಷ ಕೊಟ್ಟು ಜಿ.ಟಿ ಸುರೇಶ್ ಎಂಬುವವರು ಪಡೆದುಕೊಂಡರೆ, ಗಣಪತಿಯ ಮಣಿ ಹಾರ 65 ಸಾವಿರಕ್ಕೆ ಹರಾಜಾಗಿದ್ದು, ಲಕ್ಷ್ಮಣ ರೆಡ್ಡಿ ಎಂಬುವರು ಹಾರವನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಗಣಪತಿ ಪ್ರಸಾದ ಲಡ್ಡು 35 ಸಾವಿರಕ್ಕೆ ಹರಾಜಾಗಿದ್ದು, ಅದು ಹೂವಿನ ಮಂಜಣ್ಣ ಎಂಬುವರ ಪಾಲಾಯಿತು. ಹರಾಜು ಪ್ರಕ್ರಿಯೆ ನಡೆದ ಬಳಿಕ ಶೋಭಾಯಾತ್ರೆಗೆ ಚಾಲನೆ ದೊರೆತಿದೆ.
ಶೋಭಾಯಾತ್ರೆಯಲ್ಲಿ ಶ್ರೀಬಸವ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೃಷ್ಣಯಾದವಾನಂದ ಸ್ವಾಮೀಜಿ, ಪುಣ್ಯಾನಂದ ಸ್ವಾಮೀಜಿ, ಸರದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಶಿವಲಿಂಗದ ಸ್ವಾಮೀಜಿ, ಬ್ರಹ್ಮನಿಷ್ಠಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಪ್ರಮುಖ್ ರಾಮಮೂರ್ತಿ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗಿಯಾಗಿದ್ದರು.