ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಹಿನ್ನೆಲೆ ಮುರುಘಾ ಮಠದಲ್ಲಿ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಓಡುವ ಪುಟ್ಟ ನಾಯಿ ಮರಿಗಳು ಕಾರ್ಯಕ್ರಮಕ್ಕೆ ಮೆರಗು ತಂದವು.
ಶರಣ ಸಂಸ್ಕೃತಿ ಉತ್ಸವ ಹಿನ್ನೆಲೆ ಮುರುಘಾ ಮಠದಲ್ಲಿ ಶ್ವಾನ ಪ್ರದರ್ಶನ - Dog show at Muruga Math
ಶರಣ ಸಂಸ್ಕೃತಿ ಉತ್ಸವ ಹಿನ್ನೆಲೆ ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಮುರುಘಾ ಮಠದಲ್ಲಿ ಶ್ವಾನ ಪ್ರದರ್ಶನ
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ವಾನ ಪ್ರಿಯರು ವಿವಿಧ ತಳಿಯ ಶ್ವಾನಗಳೊಂದಿಗೆ ಆಗಮಿಸಿದ್ದರು. ಈ ಶ್ವಾನ ಪ್ರದರ್ಶನದ ತೀರ್ಪುಗಾರರನ್ನಾಗಿ ನುರಿತ ತಜ್ಞರನ್ನು ನೇಮಿಸಲಾಗಿತ್ತು. ಸ್ಪರ್ಧೆಯಲ್ಲಿ ನಮ್ಮದೇ ರಾಜ್ಯದ ಮುಧೋಳ್ ಜಾತಿಯ ನಾಯಿ ಪ್ರಥಮ ಸ್ಥಾನ ಪಡೆಯಿತು.
ಶರಣ ಸಂಸ್ಕೃತಿ ಉತ್ಸವದಲ್ಲಿ ಶ್ವಾನಗಳ ಪ್ರದರ್ಶನ ಭರ್ಜರಿಯಾಗಿಯೇ ನಡೆಯಿತು. ನೂರಾರು ಜಾತಿಯ ನಾಯಿಗಳು, ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಅನೇಕ ಪ್ರಾಣಿ ಪ್ರಿಯರು ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಭಾಗಿಯಾಗಿ ಫುಲ್ ಏಂಜಾಯ್ ಮಾಡಿದರು.