ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ನಂತರ ಬಾಣಂತಿ ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೆ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಹೆರಿಗೆ ನಂತರ ಮಹಿಳೆ ಸಾವು, ಬದುಕುಳಿದ ಅವಳಿ ಕಂದಮ್ಮಗಳು... ವೈದ್ಯರ ನಿರ್ಲಕ್ಯವೇ ಸಾವಿಗೆ ಕಾರಣ? - undefined
ಹೆರಿಗೆ ನಂತರ ಬಾಣಂತಿ ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೆ ಘಟನೆ ನಡೆದಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
ರೇಖಾ (28) ಮೃತ ಬಾಣಂತಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡವುಡೆ ಗ್ರಾಮ ನಿವಾಸಿ ಮಂಜುನಾಥ್ ರವರ ಪತ್ನಿ ರೇಖಾ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟ ತಾಯಿ ರೇಖಾ, ಎರಡನೇ ಹೆರಿಗೆಗೆ ಬಂದಿದ್ದರು.
ಇನ್ನೂ ಆಪರೇಷನ್ ಮಾಡುತ್ತಿದ್ದ ವೈದ್ಯೆ ಡಾ. ರೂಪಶ್ರೀಯವರ ಮೇಲೆ ನಿರ್ಲಕ್ಷ್ಯ ಆರೋಪವಿದ್ದು, ಇವರೇ ರೇಖಾ ಸಾವಿಗೆ ಕಾರಣ ಎಂದು ಪೋಷಕರು ದೂರಿದ್ದಾರೆ. ಆದರೆ ಆರೋಪಕ್ಕೆ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಬಳಿಕ ರೇಖಾಳಿಗೆ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.