ಚಿತ್ರದುರ್ಗ: ವೈದ್ಯರನ್ನು ಜನಸಾಮಾನ್ಯರು ವೈದ್ಯೋ ನಾರಾಯಾಣ ಹರಿ ಅಂತಾರೆ. ಅದರೆ ಚಿತ್ರದುರ್ಗದ ಖಾಸಗಿ ವೈದ್ಯರು ಮಾತ್ರ ಮಾಡಿದ್ದೇ ಸರಿ ಅನ್ನುವ ಹಾಗಿದೆ. ಹೆರಿಗೆ ವೇಳೆಹಸುಳೆಗೆ ಬಲಗೈ ಸ್ವಾಧೀನ ತಪ್ಪುವಂತೆ ಮಾಡಿದ್ದು, ಇದೀಗ ಈ ಮಗು ಜೀವನಪರ್ಯಂತ ವಿಕಲಾಂಗವಾಗಿ ಜೀವಿಸುವಂತಾಗಿದೆ.
ಚಿತ್ರದುರ್ಗದ ಚಳ್ಳಕೆರೆ ಟೋಲ್ ಗೇಟ್ ಬಳಿಯ ನಿವಾಸಿ ನಂದಿನಿ ಮಗುವಿನ ತಾಯಿ. ಈಕೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಚಿತ್ರದುರ್ಗದ ಪತಂಜಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಪರೀಕ್ಷೆ ಮಾಡಿಸುತ್ತಿದ್ದರು. ಇನ್ನು ವೈದ್ಯರಾದ ಡಾ. ತೋಯಜಾಕ್ಷಿ ಬಾಯಿಯವರು ಈಕೆಗೆ ನಾರ್ಮಲ್ ಡಿಲವರಿ ಮಾಡಿಸಿದ್ರು. ಆದ್ರೆ ಹೆರಿಗೆ ಬಳಿಕ ಮಗುವಿನ ಬಲಗೈ ಸ್ವಲ್ಪ ಸಮಸ್ಯೆ ಇದೆ. ಕೆಲ ದಿನಗಳ ಬಳಿಕ ಸರಿಯಾಗುತ್ತದೆ ಎಂದಿದ್ದರು. ಆದ್ರೆ ಮೂರು ಕೆಜಿ ತೂಗೋ ಗಂಡು ಮಗುವಿಗೆ ಐದು ತಿಂಗಳು ತುಂಬಿದರೂ ಕೈಯಲ್ಲಿ ಸ್ವಾಧೀನವೇ ಇಲ್ಲವಗಿದೆ.