ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಆರಂಭವಾದ ಬೆನ್ನಲ್ಲೇ ಸದಸ್ಯರಿಂದ ಗದ್ದಲ ಕೋಲಾಹಲ ಉಂಟಾಯಿತು. ಕಳೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ನಡುವಳಿ ಹಾಗೂ ಬೋರ್ವೆಲ್ ಬಗ್ಗೆ ಕೇಳಿದ್ದ ಪಟ್ಟಿಯನ್ನು ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಅಧಿಕಾರಿಗಳ ವಿರುದ್ಧ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸದಸ್ಯರ ಆಕ್ರೋಶ - ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಆರಂಭವಾದ ಬೆನ್ನಲ್ಲೇ ಸದಸ್ಯರಿಂದ ಗದ್ದಲ ಕೋಲಾಹಲ ಉಂಟಾಯಿತು. ಕಳೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ನಡುವಳಿ ಹಾಗೂ ಬೋರ್ವೆಲ್ ಬಗ್ಗೆ ಕೇಳಿದ್ದ ಪಟ್ಟಿಯನ್ನು ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ತಕ್ಷಣ ಪಟ್ಟಿಯನ್ನು ನೀಡುವಂತೆ ಜಿಲ್ಲಾ ಪಂಚಾಯತಿ ಸದಸ್ಯರು ಪಟ್ಟು ಹಿಡಿದ ಬೆನ್ನಲ್ಲೇ ಪಟ್ಟಿಗಾಗಿ ಸಿಇಒ ಸತ್ಯಭಾಮ ಹಾಗೂ ಕೆಲ ಜಿಲ್ಲಾ ಪಂಚಾಯ್ತಿ ಸದಸ್ಯರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಇನ್ನು ಹೊಸಯಳನಾಡು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರಾದ ಆರ್.ಗೀತಾ ರವರು ಸಿಇಒ ಸತ್ಯಭಾರವರಿಗೆ ಪಟ್ಟಿ ನೀಡದಿದ್ದಕ್ಕೆ ನಿಮಗೆ ಪ್ರಜ್ಞೆ ಇದೇಯಾ ಸಿಇಒ ಮೇಡಂ ಎಂದು ಆಕ್ರೋಶಗೊಂಡರು.
ನಂತರ ಮಾತನಾಡಿದ ಸತ್ಯಭಾಮ ಕೆಂಡಾಮಂಡಲರಾಗಿ, ಪ್ರಜ್ಞೆ ಬಗ್ಗೆ ಮಾತನಾಡಬೇಡಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆರ್.ಗೀತಾ ಅವರಿಗೆ ದಬಾಯಿಸಿದರು. ಲಕ್ಷ್ಮೀಸಾಗರ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೃಷ್ಣಮೂರ್ತಿ ಹಾಗೂ ಹೊಸಯಳನಾಡು ಕ್ಷೇತ್ರದ ಸದಸ್ಯೆ ಆರ್.ಗೀತಾ ತಕ್ಷಣ ಪಟ್ಟಿ ನೀಡುವಂತೆ ಪಟ್ಟು ಹಿಡಿದರು. ಪಟ್ಟಿ ರವಾನಿಸಲು ಮುಂದಾಗದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಸಿಇಒ ಸತ್ಯಭಾಮ ಅವರಿಗೆ ಒತ್ತಾಯಿಸಿದರು.