ಚಿತ್ರದುರ್ಗದ ಜಿಲ್ಲಾ ಎನ್ಸಿಡಿ ಕೋಶ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಿಂದ ವಿವಿಧ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಎನ್ಪಿಪಿಸಿ ಮತ್ತು ಎನ್ಸಿಎಚ್ಸಿಇ ಕಾರ್ಯಕ್ರಮದ ಅಡಿ ದಾದಿಯರು ಮತ್ತು ತಜ್ಞ ವೈದ್ಯರ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 11 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ.
ಹುದ್ದೆ ವಿವರ: ಚಿತ್ರದುರ್ಗ ಸರ್ವೇಕ್ಷಣಾಧಿಕಾರಿಗಳ ಕಚೇರಿಯಿಂದ 2 ತಜ್ಞ ವೈದ್ಯರು, 8 ಮಂದಿ ದಾದಿಯರು ಮತ್ತು ಒಬ್ಬರು ಕನ್ಸ್ಲ್ಟಂಟ್ ಪಿಜಿಷಿಯನ್ ಹುದ್ದೆ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.
ವಿದ್ಯಾರ್ಹತೆ- ವಿದ್ಯಾಭ್ಯಾಸ-ವಯೋಮಿತಿ- ವೇತನ
- ತಜ್ಞ ವೈದ್ಯರು:ಎಂಬಿಬಿಎಸ್- ಗರಿಷ್ಟ 40- 110000 ರೂ ಮಾಸಿಕ
- ನರ್ಸ್: ಜಿಎನ್ಎಂ- ಗರಿಷ್ಟ 40- 14000 ರೂ ಮಾಸಿಕ
- ಕನ್ಸ್ಲ್ಟಂಟ್ ಪಿಜಿಷಿಯನ್: ಎಂಬಿಬಿಎಸ್, ಎಂಡಿ- ಗರಿಷ್ಟ 50 -110000 ರೂ ಮಾಸಿಕ
ಅನುಭವ:
- ತಜ್ಞ ವೈದ್ಯ ವೃತ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಒಂದು ವರ್ಷದ ಕಾರ್ಯಾನುಭವ ಹೊಂದಿರಬೇಕು.
- ಕನ್ಸ್ಲ್ಟಂಟ್ ಪಿಜಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಮೂರು ವರ್ಷದ ಹುದ್ದೆ ಅನುಭವವನ್ನು ಹೊಂದಿರಬೇಕು.
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಈ ಹುದ್ದೆಗಳಿಗೆ ಮೆರಿಟ್ ಮತ್ತು ಸಂದರ್ಶನದ ಆಧಾರದ ಮೇಲೆ ಈ ಹುದ್ದೆ ಆಯ್ಕೆ ಮಾಡಲಾಗುವುದು. ಈ ಹುದ್ದೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗದಿತ ಬಯೋಡಾಟಾ, ವಿದ್ಯಾರ್ಹತೆಯ ದೃಢೀಕೃತ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಜೂನ್ 28ರಿಂದ ಜುಲೈ 17ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು
ಅರ್ಜಿ ಸಲ್ಲಿಕೆ ವಿಳಾಸ: ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಪ್ರಯೋಗ ಶಾಲಾ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ, ಚಿತ್ರದುರ್ಗ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9449843250ಗೆ ಕರೆ ಮಾಡಬಹುದಾಗಿದೆ.