ಕರ್ನಾಟಕ

karnataka

ETV Bharat / state

ಕೋಟಿಗೊಬ್ಬ 3 ನಿರ್ಮಾಪಕರ ಮೇಲೆ ಕೋಟ್ಯಂತರ ರೂ. ವಂಚನೆ ಆರೋಪ : ದೂರು ದಾಖಲು - kotigobba 3 movie

ಕೋಟಿಗೊಬ್ಬ 3 ವಿತರಣೆಗಾಗಿ ಹಣ ಪಡೆದು ರಾಂಬಾಬು ಪ್ರೊಡೆಕ್ಷನ್​ನ ಸೂರಪ್ಪ ಬಾಬು ಅವರು ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂದು ಸಿನಿಮಾ ವಿತರಕ ಖಾಜಾಫೀರ್​ ಎಂಬುವರು ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದಾರೆ. ಬಿಡುಗಡೆಯ ದಿನದಿಂದಲೇ ಕೋಟಿಗೊಬ್ಬ 3 ಸಿನಿಮಾ ವಿಘ್ನ ಎದುರಿಸುತ್ತಿದೆ..

kotigobba-3-movie-producer-soorappa-babu
ಕೋಟಿಗೊಬ್ಬ 3 ನಿರ್ಮಾಪಕರ

By

Published : Oct 17, 2021, 3:55 PM IST

ಚಿತ್ರದುರ್ಗ :ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ3 ಚಲನಚಿತ್ರ ಆರಂಭ ದಿನದಂದಲೇ ವಿಘ್ನ ಎದುರಿಸುತ್ತಿದೆ. ಇದೀಗ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದೂರು ದಾಖಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲಿ ಸಿನಿಮಾ ವಿತರಣೆಗಾಗಿ ರಾಂಬಾಬು ಪ್ರೊಡೆಕ್ಷನ್​ನ ಸೂರಪ್ಪ ಬಾಬು ಕೋಟ್ಯಂತರ ರೂ. ಹಣ ಪಡೆದು ವಂಚನೆ ಮಾಡಿದ್ದಾರೆ. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಖಾಜಾಫೀರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೋಟಿಗೊಬ್ಬನಿಗೆ ಬಿಡುಗಡೆ ದಿನದಿಂದಲೇ ವಿಘ್ನ

ಅಕ್ಟೋಬರ್ 14ರಂದು ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆಯಾಗಬೇಕಿತ್ತು. ಮಾರ್ನಿಂಗ್ ಶೋ ನೋಡಿ ಸಂಭ್ರಮಿಸಬೇಕು ಎಂದು ಕಿಚ್ಚನ ಅಭಿಮಾನಿಗಳು ಸಖತ್​​ ಖುಷಿಯಿಂದ ಇದ್ದರು. ಆದ್ರೆ, 10 ಗಂಟೆಯಾದ್ರೂ ಸಹ ಎಲ್ಲಿಯೂ ಸಹ ಸಿನಿಮಾ ಪ್ರಸಾರ ಆಗಲಿಲ್ಲ. ಇದರಿಂದ ಸುದೀಪ್​ ಅಭಿಮಾನಿಗಳು ಬೇಸರಗೊಂಡು ಆಕ್ರೋಶ ಹೊರ ಹಾಕಿದ್ದರು.

ABOUT THE AUTHOR

...view details