ಚಿತ್ರದುರ್ಗ:ಕೃಷಿ ಹೊಂಡ ನಿರ್ಮಾಣಕ್ಕೆ ಯೋಜನೆಯ ಫಲಾನುಭವಿಗೆ ಚೆಕ್ ವಿತರಿಸಲು ಲಂಚಕ್ಕೆ ಬೇಡಿಕೆಗೆ ಇಟ್ಟಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಅರಬಗಟ್ಟ ಗ್ರಾಮದ ರೈತ ಕೃಷ್ಣನಾಯ್ಕ್ ಎಂಬುವರು ಕೃಷಿ ಹೊಂಡ ನಿರ್ಮಿಸಿದ್ದರು. ಈ ಯೋಜನೆಯ 2.8 ಲಕ್ಷ ರೂ. ಚೆಕ್ ವಿತರಣೆಗೆ, ತೋಟಯ್ಯ ಅವರು ರೂ. 1.4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಈ ಕುರಿತು ಕೃಷ್ಣನಾಯ್ಕ್ ಎಂಬವರು ಎಸಿಬಿಗೆ ದೂರು ನೀಡಿದ್ದು, ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.