ಕರ್ನಾಟಕ

karnataka

ETV Bharat / state

ಅಭಿವೃದ್ಧಿಯತ್ತ ಆಡುಮಲ್ಲೇಶ್ವರ ಕಿರುಮೃಗಾಲಯ: ಅತಿಥಿಗಳ ಆಗಮನಕ್ಕೆ ದಿನಗಣನೆ - chitradurga news

ಈಗಾಗಲೇ ಚಿರತೆ, ಕರಡಿಯ ದೊಡ್ಡ ದೊಡ್ಡ ಗೂಡುಗಳನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಇದೀಗ ಬನ್ನೇರುಘಟ್ಟ ಹಾಗೂ ಮೈಸೂರು ಮೃಗಾಲಯದಿಂದ ಹುಲಿ, ಜೀಬ್ರಾ, ವಿವಿಧ ಜಾತಿಯ ಮಂಗಗಳು, ವಿವಿಧ ಪ್ರಭೇದದ ಪಕ್ಷಿಗಳು, ಸಿಂಹಗಳನ್ನು ತರಿಸಲಾಗುತ್ತಿದ್ದು, ಇದಕ್ಕೆ ಬೇಕಾದ ಗೂಡುಗಳ ನಿರ್ಮಾಣ ಕೂಡ‌ ಪ್ರಗತಿಯಲ್ಲಿದೆ.

development-adumalleswara-zoo-chitradurga-news
ಅಭಿವೃದ್ಧಿಯತ್ತ ಆಡುಮಲ್ಲೇಶ್ವರ ಕಿರುಮೃಗಾಲಯ

By

Published : Nov 18, 2020, 10:40 PM IST

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿರುವ ಕಿರು ಮೃಗಾಲಯ ಸದ್ಯದಲ್ಲೇ ಅಭಿವೃದ್ಧಿಯತ್ತ ಸಾಗಲಿದೆ‌. ಒಂದೂಕಾಲು ಎಕರೆ ವಿಸ್ತೀರ್ಣದಲ್ಲಿದ್ದ ಮೃಗಾಲಯವನ್ನು ಎಂಟು ಎಕರೆಗೆ ವಿಸ್ತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಮೃಗಾಲಯ ಇನ್ನು ಮುಂದೆ ಪ್ರವಾಸಿಗರನ್ನು ಆಕರ್ಷಿಸಲಿದೆ.

ಅಭಿವೃದ್ಧಿಯತ್ತ ಆಡುಮಲ್ಲೇಶ್ವರ ಕಿರು ಮೃಗಾಲಯ

ಕೋಟೆನಾಡು ಚಿತ್ರದುರ್ಗದಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಅರಣ್ಯ ಇಲಾಖೆ ಎಂಟು ಎಕರೆಗೆ ವಿಸ್ತರಿಸಲು ಮುಂದಾಗಿದ್ದು, ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ ಕೂಡ ಆಗಲಿದೆಯಂತೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದ್ದ ಈ ಮೃಗಾಲಯದಲ್ಲಿ ಹೊಸ‌ ಪ್ರಾಣಿಗಳನ್ನು ತರಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.

ಈಗಾಗಲೇ ಚಿರತೆ, ಕರಡಿಯ ದೊಡ್ಡ ದೊಡ್ಡ ಮನೆಗಳನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಇದೀಗ ಬನ್ನೇರುಘಟ್ಟ ಹಾಗೂ ಮೈಸೂರು ಮೃಗಾಲಯದಿಂದ ಹುಲಿ, ಜೀಬ್ರಾ, ವಿವಿಧ ಜಾತಿಯ ಮಂಗಗಳು, ವಿವಿಧ ಪ್ರಭೇದದ ಪಕ್ಷಿಗಳು, ಸಿಂಹಗಳನ್ನು ತರಿಸಲಾಗುತ್ತಿದ್ದು, ಇದಕ್ಕೆ ಮನೆಗಳ ನಿರ್ಮಾಣ ಕೂಡ‌ ಪ್ರಗತಿಯಲ್ಲಿದೆ.

ಇನ್ನು ಈ ಮೃಗಾಲಯ ಅಭಿವೃದ್ಧಿ ಮಾಡಲು ಜಿಲ್ಲಾ ಡಿಎಂ​​ಎಫ್ ಫಂಡ್​​ನಿಂದ ಐದು ಕೋಟಿ ರೂ. ನೀಡುವುದಾಗಿ ಸಂಸದ ಎ.ನಾರಾಯಣಸ್ವಾಮಿ ಘೋಷಣೆ ಮಾಡಿದ್ದಾರೆ. ಐದು ಕೋಟಿ ಹಣ ಬಿಡುಗಡೆ ಆದರೆ ಒಂದು ವರ್ಷದಲ್ಲಿ ಮೃಗಾಲಯ ಪ್ರವಾಸಿಗರನ್ನು ಆಕರ್ಷಿಸಲಿದೆ.

ಮೃಗಾಲಯದ ಜೊತೆಗೆ ಉದ್ಯಾನವನ ಕೂಡ ಮಾಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಾದರ ಚನ್ನಯ್ಯ ಶ್ರೀಯವರ ಒತ್ತಾಯಕ್ಕೆ ಮಣಿದ ಸಂಸದ ಎ.ನಾರಾಯಣಸ್ವಾಮಿಯವರು ಜಿಲ್ಲಾ ಖನಿಜ ಸಂಪತ್ತಿನಲ್ಲಿ ಐದು ಕೋಟಿ ರೂ.ಗಳನ್ನು ಮೃಗಾಲಯದ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದ್ದಾರೆ. ಆ ಹಣವನ್ನು ಬಳಕೆ ಮಾಡಿ ಮಧ್ಯ ಕರ್ನಾಟಕದ ಪ್ರವಾಸಿ ಸ್ಥಳವಾಗಿ ಮಾಡಬೇಕಾಗಿದೆ ಎಂದು ಚನ್ನಯ್ಯ ಶ್ರೀ ಮನವಿ ಮಾಡಿದರು.

ABOUT THE AUTHOR

...view details