ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಬಳಿ 4 ಎಕರೆಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಬಂಧಿಸುವಲ್ಲಿ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಡೇರಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - Rampur Police Station, Chitradurga
ಚಿತ್ರದುರ್ಗ ಜಿಲ್ಲೆಯಲ್ಲಿ 4 ಎಕರೆ ಜಮೀನು ಲೀಸ್ಗೆ ಪಡೆದು ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಲ್ವರ ಬಂಧನ
ಬಳ್ಳಾರಿ ಮೂಲದ ಪ್ರಮುಖ ಆರೋಪಿ ರುದ್ರೇಶ್, ಈತನ ಸಹೋದರ ಶಿವಕುಮಾರ್, ಗಾಂಜಾ ಖರೀದಿಸಲು 2 ಲಕ್ಷ ರೂ. ಮುಂಗಡ ಹಣ ನೀಡಿದ್ದ ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ಶ್ರೀನಿವಾಸ್, ಹನುಮಂತಪ್ಪನನ್ನು ಬಂಧಿಸಲಾಗಿದೆ.
4ಎಕರೆ ಜಮೀನು ಲೀಜ್ ಪಡೆದು ಗಾಂಜಾ ಬೆಳೆದಿದ್ದ ರುದ್ರೇಶ್ ತಲೆಮರೆಸಿಕೊಂಡಿದ್ದ. ಸೆಪ್ಟೆಂಬರ್ 03 ರಂದು ಗಾಂಜಾ ವಶಕ್ಕೆ ಪಡೆದ ರಾಂಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಒಟ್ಟು ಎಂಟು ಜನ ಆರೋಪಿಗಳು ಅಂದರ್ ಆಗಿದ್ದು, ಸೆಪ್ಟೆಂಬರ್ 03 ರಂದು ಸುಮಾರು 10 ಟನ್ ಗಾಂಜಾ ವಶಕ್ಕೆ ಪಡೆಯಲಾಗಿತ್ತು.