ಚಿತ್ರದುರ್ಗ:ಜಾತ್ರೆ ಪ್ರಯುಕ್ತ ಜಾಲಿ ಗಿಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಜೆಬಿಸಿಗೆ ಸಿಲುಕಿ ಸಾವನಪ್ಪಿದ್ದಾನೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿ ಮೇಲೆ ಹರಿದ ಜೆಸಿಬಿ: ಸ್ಥಳದಲ್ಲೇ ಸಾವು - ಚಳ್ಳಕೆರೆ
ತಿಪ್ಪೇಸ್ವಾಮಿ ಎಂಬುವರು ಜೆಸಿಬಿ ಯಂತ್ರದ ಪಕ್ಕದ ಹೈಮಾಸ್ಕ್ ದೀಪದ ಕೆಳಗೆ ಮಲಗಿದ್ದರು. ಇದನ್ನುಗಮನಿಸದ ಜೆಸಿಬಿ ಚಾಲಕ ತಿಪ್ಪೇಸ್ವಾಮಿ ಮೇಲೆ ಜೆಸಿಬಿ ಹರಿಸಿದ್ದಾನೆ . ಪರಿಣಾಮ ತಿಪ್ಪೇಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಜೆಸಿಬಿ ಕೆಳಗೆ ಸಿಲುಕಿ ವ್ಯಕ್ತಿ ಸಾವು
ಗೌರಸಮುದ್ರ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ (45) ಸಾವನ್ನಪ್ಪಿದವರು.ತಿಪ್ಪೇಸ್ವಾಮಿ ಜೆಸಿಬಿ ಯಂತ್ರದ ಪಕ್ಕದ ಹೈಮಾಸ್ಕ್ ದೀಪದ ಕೆಳಗೆ ಮಲಗಿದ್ದರು. ಇದನ್ನುಗಮನಿಸದ ಜೆಸಿಬಿ ಚಾಲಕ ತಿಪ್ಪೇಸ್ವಾಮಿ ಮೇಲೆ ಜೆಸಿಬಿ ಹರಿಸಿದ್ದಾನೆ . ಪರಿಣಾಮ ತಿಪ್ಪೇಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ , ಪಿಎಸ್ಐ ಸತೀಶ್ ನಾಯ್ಕ್ ತನಿಖೆಗೆ ಮುಂದಾಗಿದ್ದಾರೆ. ಈ ಸಂಬಂಧ ತಳುಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 2, 2019, 5:44 AM IST