ಚಿತ್ರದುರ್ಗ :ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು, ಟೀಕೆ-ಟಿಪ್ಪಣಿ ಮಾಡೀದ್ರೇ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಪ್ರತಿಕ್ರಿಯೆ ನೀಡಲು ಇದು ಸೂಕ್ತು ಸಮಯವೂ ಅಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ದೇವೇಗೌಡ್ರು ಟೀಕೆ-ಟಿಪ್ಪಣಿ ಮಾಡಿದ್ರೇ ಅವರಿಗೆ ಉತ್ತರಿಸಲು ಇದು ಸಮಯವಲ್ಲ.. ಡಿಸಿಎಂ ಕಾರಜೋಳ - latest statement by DCM karajola
ನಾವು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ನಮ್ಮ ರಾಜ್ಯವಲ್ಲ, ಪ್ರಪಂಚದ 196 ದೇಶಗಳು ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ.
ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇಡೀ ಪ್ರಪಂಚವೇ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದೆ. ಈ ಸಮಯದಲ್ಲಿ ನಾವು ರಾಜಕೀಯ ಮಾಡದೆ ದುಃಖಿತರಿಗೆ ಸಾಂತ್ವನ ಹೇಳಬೇಕು. ದೇಶದಲ್ಲಿ 9 ಸಾವಿರ ಸೋಂಕಿತರಿದ್ದಾರೆ. ಅವರ ನೆರವಿಗೆ ಬರುವುದು, ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರನ್ನು ಟೀಕೆ ಮಾಡಲು ಇದು ಸಮಯವಲ್ಲ, ಕ್ಷಮೆ ಇರಲಿ ಎಂದರು. ಮಾಜಿ ಪ್ರಧಾನಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ ಸಲಹೆ ಸೂಚನೆಗಳನ್ನು ರಾಜ್ಯ ಸರ್ಕಾರ ಪಾಲನೆ ಮಾಡ್ತಿಲ್ಲ ಎಂಬ ಹೆಚ್ಡಿಡಿ ಟೀಕೆಗೆ ಪ್ರತಿಕ್ರಿಯೆ ನೀಡದೆ ಡಿಸಿಎಂ ಹಾಗೇ ಮುಂದೆ ನಡೆದರು.
ಬಳಿಕ ರಾಜ್ಯ ಆರ್ಥಿಕ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ನಮ್ಮ ರಾಜ್ಯವಲ್ಲ, ಪ್ರಪಂಚದ 196 ದೇಶಗಳು ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ ಎಂದರು.