ಚಿತ್ರದುರ್ಗ:ಹಂದಿಗಳನ್ನು ಕಳ್ಳತನ ಮಾಡಲು ಬಂದಿದ್ದ ಆಗಂತುಕರು ಮೂವರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ ಘಟನೆ ನಗರಲ್ಲಿ ಇತ್ತೀಚೆಗೆ ನಡೆದಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಹಂದಿ ಕಳ್ಳರಿಂದ ಮೂವರ ಹತ್ಯೆ ಪ್ರಕರಣ: ಪರಿಹಾರ ಚೆಕ್ ವಿತರಿಸಿದ ಡಿಸಿ - Solution Check Issued
ಹಂದಿ ಕದಿಯಲು ಬಂದವರಿಂದ ಹತ್ಯೆಗೀಡಾದ ಮೃತ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರಿ ಪರಿಹಾರದ ಚೆಕ್ ವಿತರಿಸಿದರು.
ಪರಿಹಾರ ಚೆಕ್ ವಿತರಿಸಿದ ಡಿಸಿ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಹೊರವಲಯದಲ್ಲಿ ಆ. 17ರಂದು ಮೂವರನ್ನು ಹತ್ಯೆ ಮಾಡಿದ ಆಗಂತುಕರು ಸ್ಥಳದಿಂದ ಕಾಲ್ಕಿತ್ತಿದ್ದರು. ಹಾಗಾಗಿ ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ ಮೃತರ ಕುಟುಂಬಕ್ಕೆ ತಲಾ 4 ಲಕ್ಷದ 12 ಸಾವಿರ ರೂ. ಚೆಕ್ ನೀಡಿದರು.