ಚಿತ್ರದುರ್ಗ: ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಬೆನ್ನಲ್ಲೇ ಡೇಟಾ ಎಂಟ್ರಿ ಆಪರೇಟರ್ ಹೊರಗುತ್ತಿಗೆ ನೌಕರನೋರ್ವ ಚಳ್ಳಕೆರೆ ಪಟ್ಟಣದ ವಿಕಾಸ ಸೌಧದ ಮುಂದೆ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು.
ಕೆಲಸದಿಂದ ವಜಾಗೊಳಿಸಿದ್ದಕ್ಕೆ ವಿಕಾಸಸೌಧದ ಮುಂದೆ ಧರಣಿ ಕುಳಿತ ಡೇಟಾ ಆಪರೇಟರ್ - ಚಿತ್ರದುರ್ಗ ಜಿಲ್ಲಾ ಸುದ್ದಿ
ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಕಾರಣ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿಯ ಗ್ರಾಮ ಪಂಚಾಯಿತಿಯ ಹೊರಗುತ್ತಿಗೆ ನೌಕರ ಜಗದೀಶ್ ನ್ಯಾಯಕ್ಕಾಗಿ ವಿಕಾಸ ಸೌಧದ ಮುಂದೆ ಕುಟುಂಬ ಸಮೇತ ಪ್ರತಿಭಟಿಸುತ್ತಿದ್ದಾರೆ.
ಡೇಟಾ ಆಪರೇಟರ್
ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿಯ ಗ್ರಾಮ ಪಂಚಾಯಿತಿಯ ಹೊರಗುತ್ತಿಗೆ ನೌಕರ ಜಗದೀಶ್ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದು, ಕೆಲಸದಿಂದ ತೆಗೆದು ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನನ್ನನ್ನು ದ್ವೇಷದಿಂದ ತೆಗೆದುಹಾಕಿದ್ದಾರೆ. ಅಲ್ಲದೆ ಪಿಎಫ್, ಐಎಸ್ಐ ಸೌಲಭ್ಯವನ್ನೂ ನೀಡಿಲ್ಲ. ಕೆಲಸ ಇಲ್ಲದೆ ಕುಟುಂಬದ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.