ಕರ್ನಾಟಕ

karnataka

ETV Bharat / state

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ: ರಾಜ್ಯದಲ್ಲೇ ಹೆಸರುವಾಸಿ ಮಧ್ಯ ಕರ್ನಾಟಕದ ದಸರಾ - Dasara news

ನಗರದ ಮುರುಘಾ ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ದಸರಾ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಶರಣಸಂಸ್ಕೃತಿ ಉತ್ಸವವನ್ನು ದಸರಾ ರೀತಿಯಲ್ಲೇ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ

By

Published : Oct 8, 2019, 8:17 PM IST

Updated : Oct 8, 2019, 11:39 PM IST

ಚಿತ್ರದುರ್ಗ: ನಗರದ ಮುರುಘಾ ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ದಸರಾ ರಾಜ್ಯದಲ್ಲೇ ಹೆಸರುವಾಸಿ. ಶರಣಸಂಸ್ಕೃತಿ ಉತ್ಸವವನ್ನು ದಸರಾ ರೀತಿಯಲ್ಲೇ ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಕೋಟೆನಾಡಿನಲ್ಲಿ ವಿಜಯದಶಮಿ ವೈಭವ

ಒಟ್ಟು ಒಂಭತ್ತು ದಿನಗಳ ಕಾಲ ನಡೆಯುವ ಮಧ್ಯ ಕರ್ನಾಟಕದ ಖಾಸಗಿ ದರ್ಬಾರ್, ಮೈಸೂರು ದಸರಾದ ರೀತಿಯಲ್ಲೇ ಆಚರಣೆ ಮಾಡಲಾಗುತ್ತದೆ. ಮುರುಘಾ ಮಠದ ಅನುಭವ ಮಂಟಪದಲ್ಲಿ ನಾಡು, ನುಡಿ, ಸಾಹಿತ್ಯ, ಪರಂಪರೆಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ವಿಜಯದಶಮಿಯಂದು ಶ್ರೀ ಮಠದ ಆವರಣದಿಂದ ಕೋಟೆ ಮೇಲಿರುವ ಮೂಲ ಮುರುಘಾ ಮಠದವರೆಗೆ ಶ್ರೀಗಳನ್ನು ಬೆಳ್ಳಿ ರಥದ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಾಡಿನ ಅನೇಕ ಕಡೆಗಳಿಂದ ಆಗಮಿಸುವ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ‌ ಪಾಲ್ಗೊಂಡು ಉತ್ಸವಕ್ಕೆ ಕಳೆ ಕಟ್ಟುತ್ತವೆ. ಮುರುಘಾ ಮಠದ ಶೂನ್ಯ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಹೊತ್ತ ಬೆಳ್ಳಿಯ ರಥ ನಗರದ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೇ ಮಠದ ಭಕ್ತಾದಿಗಳು ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿಗೈಯುತ್ತಾರೆ.

ಈ ಉತ್ಸವದಲ್ಲಿ ವಿವಿಧ ಸ್ಥಬ್ದ ಚಿತ್ರಗಳು, ಕೋಲಾಟ, ಡೊಳ್ಳು ಕುಣಿತ, ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ನೃತ್ಯಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಮುರುಘಾ ಮಠದ ಆವರಣದಲ್ಲಿ ಜರಗುವ ಕಾರ್ಯಕ್ರಮಗಳನ್ನು ನೋಡಲು ಅನೇಕ ಭಕ್ತರು ಆಗಮಿಸುತ್ತಾರೆ.

Last Updated : Oct 8, 2019, 11:39 PM IST

ABOUT THE AUTHOR

...view details