ಚಿತ್ರದುರ್ಗ: ಸ್ಯಾಂಡಲ್ವುಡ್ ನಟ ದರ್ಶನ್ ಜನ್ಮದಿನದ ಪ್ರಯುಕ್ತ ತಡರಾತ್ರಿಯೇ ಯುವಕರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಸಂಭ್ರಮಾಚರಣೆ ಮಾಡಿದ್ದಾರೆ.
ಇಂದು ಸಹ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಬಳಗದ ಕೆಲ ಸದಸ್ಯರು ಕೋಟೆನಾಡಿನಲ್ಲಿ ಬಡವರಿಗೆ ಉಡುಗೊರೆ ನೀಡುವುದು. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಹಾಗೂ ಅನಾಥಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನ ನಡೆಸಿ ಗಜನ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.