ಚಿತ್ರದುರ್ಗ : ವೈದ್ಯೆಯೊಬ್ಬರು ಕೋವಿಡ್ ಸೋಂಕಿತರಿಗೆ ವ್ಯಾಯಾಮ, ಡ್ಯಾನ್ಸ್ ಮಾಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಡ್ಯಾನ್ಸ್, ವ್ಯಾಯಾಮ ಮಾಡಿಸಿ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುತ್ತಿರುವ ವೈದ್ಯೆ - Indira Gandhi Residential School
ಹಿರಿಯೂರು ತಾಲೂಕು ಜೆ.ಜಿ. ಹಳ್ಳಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗ್ತಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜಿ. ಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಕೋವಿಡ್ ಸೆಂಟರ್ನ ಡಾ. ಶೃತಿ ಹೊಸ ಪ್ರಯತ್ನ ಮಾಡುತ್ತಿರುವ ವೈದ್ಯೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿರುವುವ ಈಕೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಕೋವಿಡ್ ಸೋಂಕಿತರಿಗೆ ಔಷಧಿಗಳ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವುದು ಅಷ್ಟೇ ಮುಖ್ಯ. ನಾವು ವೈದ್ಯಕೀಯ ಚಿಕಿತ್ಸೆಯ ಹೊರತಾಗಿ ರೋಗಿಗಳನ್ನು ಸಂತಸಪಡಿಸುವ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ, ಡ್ಯಾನ್ಸ್, ವ್ಯಾಯಾಮಗಳನ್ನು ಮಾಡಿಸುತ್ತಿದ್ದೇವೆ ಎಂದು ಡಾ. ಶೃತಿ ಹೇಳುತ್ತಾರೆ.