ಕರ್ನಾಟಕ

karnataka

ETV Bharat / state

ಕೊರೊನಾ ತಡೆಗೆ ರಾತ್ರಿ ಕರ್ಫ್ಯೂ ಜಾರಿ: ಡಿಸಿ ಡಾ. ವಿನೋತ್‌ ಪ್ರಿಯಾ - Chitradurga latest news

ಸೋಂಕು ತಡೆಗೆ ಜು. 5 ರಿಂದ ಆ.2 ರವರೆಗಿನ ಎಲ್ಲಾ ಭಾನುವಾರ ಸೇರಿದಂತೆ ಪ್ರತಿದಿನ ರಾತ್ರಿ 08 ರಿಂದ ಬೆಳಿಗ್ಗೆ 05 ರವರೆಗೆ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಇಂದು ಆದೇಶ ಹೊರಡಿಸಿದ್ದಾರೆ.

DC vinot priya
DC vinot priya

By

Published : Jun 30, 2020, 11:14 PM IST

ಚಿತ್ರದುರ್ಗ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ, ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಸೋಂಕು ನಿಯಂತ್ರಿಸುವ ಹಿನ್ನೆಲೆ, ಜು. 5 ರಿಂದ ಆ.2 ರವರೆಗಿನ ಎಲ್ಲಾ ಭಾನುವಾರ ಸೇರಿದಂತೆ ಪ್ರತಿದಿನ ರಾತ್ರಿ 08 ರಿಂದ ಬೆಳಿಗ್ಗೆ 05 ರವರೆಗೆ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಇಂದು ಆದೇಶ ಹೊರಡಿಸಿದ್ದಾರೆ.

ಜು. 05 ರಿಂದ ಆ. 02 ರವರೆಗಿನ ಎಲ್ಲಾ ಭಾನುವಾರಗಳು ಪೂರ್ಣ ದಿನದ ಲಾಕ್ ಡೌನ್ ಇರಲಿದ್ದು, ಅಗತ್ಯ ಸೇವೆ, ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ, ಮಳಿಗೆ, ಸೇವೆಗಳು ಇರುವುದಿಲ್ಲ. ಅಗತ್ಯ ಸರಕು ಸರಬರಾಜು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಕರ್ಫ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆ ಹೊರತುಪಡಿಸಿ, ಉಳಿದಂತೆ ಅವಶ್ಯಕವಲ್ಲದ ಚಟುವಟಿಕೆಗಳು, ವ್ಯಕ್ತಿ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ABOUT THE AUTHOR

...view details