ಕರ್ನಾಟಕ

karnataka

ETV Bharat / state

ನಿತ್ರಾಣಗೊಂಡ ದೇವರ ಹಸುಗಳಿಗೆ ಚಿಕಿತ್ಸೆ: ಇದು ಈಟಿವಿ ಭಾರತ್​ ಫಲಶೃತಿ - undefined

ಬಿಸಿಲಿನಿಂದ ಬಳಲಿ ನಿತ್ರಾಣಗೊಂಡಿದ್ದ ದೇವರ ಹಸುಗಳ ಕುರಿತು ಈ ಟಿವಿ ಭಾರತ್​ ಪ್ರಕಟಿಸಿದ್ದ ವರದಿಯು ಫಲ ನೀಡಿದ್ದು, ಈ ಎಲ್ಲ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಿತ್ಸೆ ನಂತರ ಚೇತರಿಸಿಕೊಂಡ ದೇವರ ಹಸುಗಳು

By

Published : May 6, 2019, 9:37 PM IST

ಚಿತ್ರದುರ್ಗ: ಬಿಸಿಲಿನಿಂದ ನಿತ್ರಾಣಗೊಂಡ ದೇವರ ಹಸುಗಳಿಗೆ ತಾಲೂಕು ಆಡಳಿತದಿಂದ ಸೂಕ್ತ ಚಿಕಿತ್ಸೆ ನೀಡಿದ ಬೆನ್ನಲ್ಲೇ ಇದೀಗ ಹಸುಗಳು ಆರೋಗ್ಯವಾಗಿವೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮದೇವರಹಟ್ಟಿ ದೇವರ ಹಸುಗಳ ಕುರಿತು ನಿರಂತರ ಸುದ್ದಿ ಪ್ರಕಟಿಸಿದ್ದ ಈಟಿವಿ ಭಾರತ್ ವರದಿಗೆ ಸ್ಪಂದಿಸಿದ್ದು, ಅವುಗಳಿಗೆ ಅಗತ್ಯ ಚಿಕಿತ್ಸೆ ಸಿಕ್ಕಿದೆ. ಪರಿಣಾಮವಾಗಿ ಹಸುಗಳು ಚೇತರಿಸಿಕೊಂಡಿವೆ. ಸದ್ಯ ಅವು ಆರೋಗ್ಯವಾಗಿದ್ದು, ಸ್ಥಳಕ್ಕೆ ಶಾಸಕ ರಘುಮೂರ್ತಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿತ್ಸೆ ನಂತರ ಚೇತರಿಸಿಕೊಂಡ ದೇವರ ಹಸುಗಳು

ಇದರ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಮೂರ್ತಿ ಚಳ್ಳಕೆರೆ ಕ್ಷೇತ್ರಗಳಲ್ಲಿ ನೀರು, ಮೇವಿನ ಕೊರತೆಯಿಂದ ಯಾವ ಹಸುಗಳೂ ಸಾವನ್ನಪ್ಪಿಲ್ಲ. ಬಿಸಿಲಿನ ಜಳಕ್ಕೆ ನಿತ್ರಾಣಗೊಂಡಿವೆ. ಈಗಾಗಲೇ ಜಿಲ್ಲೆಯಾದ್ಯಂತ ಗೋಶಾಲೆಗಳನ್ನು ತೆರೆಯಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳೂ ಕೂಡ ಬರ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ ಎಂದರು.

For All Latest Updates

TAGGED:

ABOUT THE AUTHOR

...view details