ಕರ್ನಾಟಕ

karnataka

ETV Bharat / state

ಹಿರಿಯೂರಲ್ಲಿ ಮಳೆಗೆ ಮನೆ ಗೋಡೆ ಕುಸಿದು ದಂಪತಿ ಸಾವು - ಚಿತ್ರದುರ್ಗ ಮನೆ ಗೋಡೆ ಕುಸಿತ ಪ್ರಕರಣ

ಜಿಟಿ ಜಿಟಿ ಮಳೆಗೆ (Rain in Chitradurga) ಮನೆಯ ಗೋಡೆ ಕುಸಿದು (Wall collapsed) ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಿರಿಯೂರು (Hiriyuru taluk) ತಾಲೂಕಿನಲ್ಲಿ ಸಂಭವಿಸಿದೆ.

couple-died-in-house-wall-collapse-at-chitradurga
Wall Collapse: ಹಿರಿಯೂರಲ್ಲಿ ಮಳೆಗೆ ಮನೆ ಗೋಡೆ ಕುಸಿದು ದಂಪತಿ ಸಾವು

By

Published : Nov 14, 2021, 11:36 AM IST

ಚಿತ್ರದುರ್ಗ:ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ (Rain in Chitradurga) ಮನೆಯ ಗೋಡೆ ಕುಸಿದು (Wall collapsed) ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಹಿರಿಯೂರು (Hiriyuru taluk) ತಾಲೂಕಿನ ಕಾರೋಬನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರೋಬನಹಟ್ಟಿ ಗ್ರಾಮದ ನಿವಾಸಿಗಳಾದ ಚೆನ್ನಕೇಶವ (26) ಹಾಗೂ ಸೌಮ್ಯ (20) ಮೃತ ದಂಪತಿಯಾಗಿದ್ದಾರೆ. ಚೆನ್ನಕೇಶವ ಅವರ ತಂದೆ ಕ್ಯಾತಣ್ಣ (55) ಗಾಯಗೊಂಡಿದ್ದು, ಚಿತ್ರದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ(Chitradurga Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ಕ್ಯಾತಣ್ಣನಿಗೆ ಇಬ್ಬರು ಗಂಡು ಮಕ್ಕಳಿದ್ದು, ಆತ, ಕಿರಿಯ ಮಗ ಹಾಗೂ ಸೊಸೆಯ ಜೊತೆ ಬೇರೆ ಮನೆಯಲ್ಲಿ ವಾಸವಿದ್ದರು. ಹಿರಿಮಗ ಮೃತ ಚೆನ್ನಕೇಶವ, ಪತ್ನಿ ಸೌಮ್ಯ ಅವರು ಕೂಡ ಮನೆಯ ಕ್ಯಾತಣ್ಣನ ಪಕ್ಕದಲ್ಲೇ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರು.

ನಿನ್ನೆ ತಡರಾತ್ರಿ ಗುಡಿಸಲಿನ ಮೇಲೆ ಮನೆ ಗೋಡೆ ಕುಸಿದುಬಿದ್ದು ಅವಘಡ ಸಂಭವಿಸಿದೆ. ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೋಲಾರ: ದತ್ತಪೀಠಕ್ಕೆ ಹೊರಟಿದ್ದ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ABOUT THE AUTHOR

...view details