ಕರ್ನಾಟಕ

karnataka

ETV Bharat / state

ಪತ್ನಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಪತಿಯೂ ಸಾವಿಗೆ ಶರಣು - couple suicide news

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ನೇಣಿಗೆ ಶರಣಾಗಿದ್ದನ್ನು ಕಂಡು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.

couple suicide in chitradurga
ಚಿತ್ರದುರ್ಗದಲ್ಲಿ ದಂಪತಿ ಆತ್ಮಹತ್ಯೆ

By

Published : Sep 13, 2021, 4:55 PM IST

ಚಿತ್ರದುರ್ಗ:ಕೌಟುಂಬಿಕ ಕಲಹದಿಂದ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದ್ಲಗಟ್ಟೆ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಚಿತ್ರದುರ್ಗ ಎಸ್​​ಪಿ​ ಮಾಹಿತಿ

ಪತಿ-ಪತ್ನಿ ನಡುವೆ ಜಗಳವಾಗಿ ಮನನೊಂದು ಶೈಲಜಾ (29)ಆತ್ಮಹತ್ಯೆ ಮಾಡಿಕೊಂಡಿದ್ರು. ಇವರು ನೇಣಿಗೆ ಶರಣಾದ ಕೆಲವೇ ಗಂಟೆಗಳಲ್ಲಿ ಪತಿ ಮಹಂತೇಶ್ ಕೂಡ ಸಾವಿನ ಹಾದಿ ತುಳಿದಿದ್ದಾರೆ.

ಶೈಲಜಾ ತಾಯಿ ಆಕೆಗೆ ಮೊದಲಿನಿಂದಲೂ ವಿಪರೀತ ಹೊಟ್ಟೆ ನೋವು ಇತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಹೇಳಿದ್ದಾರೆ. ಮಹಂತೇಶ್ ತಾಯಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ರೀತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮೃತರಿಗೆ ನಾಲ್ಕೈದು ವರ್ಷದ ಇಬ್ಬರು ಮಕ್ಕಳಿದ್ದು, ಇದೀಗ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಸದ್ಯ ಮೃತರಿಬ್ಬರ ಕಡೆಯವರು ಪೊಲೀಸ್ ಮೆಟ್ಟಿಲೇರಿದ್ದಾರೆ. ತಳಕು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಕೋರ್ಟ್‌ ಆವರಣದಲ್ಲೇ ವಕೀಲರ ಜೇಬಿನಲ್ಲಿದ್ದ ಒನ್ ಪ್ಲಸ್ ನಾರ್ಡ್-2 ಸ್ಮಾರ್ಟ್ ಫೋನ್ ಸ್ಫೋಟ!

ABOUT THE AUTHOR

...view details