ಚಿತ್ರದುರ್ಗ: ವಿದೇಶಗಳಲ್ಲಿ ಕೊರೊನಾ ಹಾವಳಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ದೇಶಕ್ಕೆ ಜನ ಮರಳುತ್ತಿದ್ದಾರೆ. ಇದುವರೆಗೂ ವಿದೇಶಗಳಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿರುವ 79 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಪಾಲಾಕ್ಷಪ್ಪ ಮಾಹಿತಿ ನೀಡಿದರು.
ವಿದೇಶಗಳಿಂದ ಬಂದ 79 ಜನರ ಮೇಲೆ ನಿಗಾ: ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ
ರಾಜ್ಯದಲ್ಲಿ ವೈರಸ್ ಹಾವಳಿ ಹೆಚ್ಚದಂತೆ ಜಿಲ್ಲಾವಾರು ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿದೇಶಿದಿಂದ ಬಂದ 79 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಪಾಲಾಕ್ಷಪ್ಪ ಮಾಹಿತಿ ನೀಡಿದರು.
ಡಾ. ಪಾಲಾಕ್ಷಪ್ಪ
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, 79 ಜನರ ಪೈಕಿ 77 ಜನರನ್ನು ಮನೆಯಲ್ಲಿ ಇರಿಸಿ, ಉಳಿದ ಇಬ್ಬರಿಗೆ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿರಿಸಿ ನಿಗಾ ವಹಿಸಲಾಗಿದೆ ಎಂದರು.
ಇನ್ನೂ 27 ಜನರ ರಕ್ತದ ಮಾದರಿ, ಗಂಟಲು ದ್ರವ ಪಡೆದು ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಲಾಗಿದೆ. 6 ಜನರಿಗೆ ಕೊರೊನಾ ನೆಗೆಟಿವ್ ಬಂದಿದೆ. ಇನ್ನುಳಿದ 21 ಜನರ ವರದಿ ಬರಬೇಕಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.