ಚಿತ್ರದುರ್ಗ: ದೇಶದಲ್ಲಿ ಮಹಾಮಾರಿ ಕೊರೊನಾ ನಿರಂತರವಾಗಿ ಜನರನ್ನು ಬಲಿ ಪಡೆಯುತ್ತಲೇ ಇದೆ. ವ್ಯಾಕ್ಸಿನ್ ಕಂಡುಹಿಡಿಯುವ ಪ್ರಯತ್ನವನ್ನು ಹಲವು ಕಂಪನಿಗಳು ಮುಂದುವರೆಸಿವೆ.
ಇದೀಗ ವ್ಯಾಕ್ಸಿನ್ಗಳ ಪ್ರಯೋಗಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಕಾದಂಬರಿಕಾರ ಡಿ.ಸಿ.ಪಾಣಿಯವರ ಮೇಲೆ ಕೋವಿಂಡ್-19 ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಕಾದಂಬರಿಕಾರ ಪಾಣಿಯವರ ಮೇಲೆ ಪ್ರಯೋಗ ಮಾಡಲಾಗಿದೆ.
ಕಾದಂಬರಿಕಾರ ಡಿ.ಸಿ.ಪಾಣಿಯವರ ಮಾತು ಮೊದಲನೇ ಹಂತವಾಗಿ ಲಸಿಕೆಯನ್ನು ಪಡೆದಿರುವ ಡಿ.ಸಿ.ಪಾಣಿಯವರು ತಾವೇ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದಿದ್ದಾರಂತೆ. ಇನ್ನೂ ವಿಶೇಷವಾಗಿ ಫಾರ್ಮಜೆಟ್ ಮಷಿನ್ ಮೂಲಕ ಡಾ. ಪಾರಿತೋಷ್ ವಿ. ದೇಸಾಯಿ ಎಂಬ ವೈದ್ಯರು ಪ್ರಾಯೋಗಿಕವಾಗಿ ಲಸಿಕೆಯನ್ನು ಡಿ.ಸಿ.ಪಾಣಿಯವರಿಗೆ ನೀಡಿದ್ದಾರೆ.
ಲಸಿಕೆ ಪ್ರಯೋಗ ಮಾಡುವ ವೇಳೆ ನನಗೆ ಯಾವುದೇ ಭಯ ಇರಲಿಲ್ಲ. ಆದರೆ ಈ ಲಸಿಕೆ ಯಶಸ್ವಿಯಾದರೆ ದೇಶಕ್ಕೆ ಅಂಟಿಕೊಂಡಿರುವ ಕೊರೊನಾ ದೂರವಾಗಲಿದ್ದು, ಲಸಿಕೆ ಪಡೆದಿದ್ದರಿಂದ ನನ್ನ ಜನ್ಮ ಸಾರ್ಥಕ ಎಂದು ಅಭಿಪ್ರಾಯಪಟ್ಟರು.
ಈ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿದ್ದು, ದೇಶದ ಸಾಕಷ್ಟು ಭಾಗಗಳಲ್ಲಿ ಪ್ರಯೋಗ ನಡೆಸುತ್ತಿದೆ. ರಾಜ್ಯದಲ್ಲೂ ಸಹ ಪ್ರಯೋಗಕ್ಕೆ ಮುಂದಾಗಿದೆ.