ಚಿತ್ರದುರ್ಗ:ಜಿಲ್ಲಾ ಆರೋಗ್ಯ ಇಲಾಖೆ ಘೋಷಣೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿಂದು 213 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದೆ.
ಚಿತ್ರದುರ್ಗದಲ್ಲಿಂದು 213 ಕೊರೊನಾ ಪ್ರಕರಣ ಪತ್ತೆ : ಒಟ್ಟು ಸೋಂಕಿತರ ಸಂಖ್ಯೆ 3258 - ಗುಣಮುಖ
ಚಿತ್ರದುರ್ಗದಲ್ಲಿ ಹೊಸದಾಗಿ ಇಂದು 213 ಜನರಿಗೆ ಸೋಂಕು ತಗುಲಿದ್ದು, ಕೊರೊನಾದಿಂದ ಗುಣಮುಖರಾಗಿ 15 ಜನ ಬಿಡುಗಡೆಯಾಗಿದ್ದಾರೆ.
ಕೊರೊನಾ ಪ್ರಕರಣ ಪತ್ತೆ
ಚಿತ್ರದುರ್ಗ 70, ಹೊಸದುರ್ಗ-11, ಹಿರಿಯೂರು -17, ಹೊಳಲ್ಕೆರೆ -28, ಮೊಳಕಾಲ್ಮೂರು- 37, ಚಳ್ಳಕೆರೆ -50 ಪ್ರಕರಣಗಳು ಸೇರಿ ಒಟ್ಟು 213 ಪ್ರಕರಣಗಳು ದೃಢಪಟ್ಟಿವೆ. ಜೊತೆಗೆ ಕೊರೊನಾದಿಂದ ಗುಣಮುಖರಾಗಿ 15 ಜನ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3258 ಕ್ಕೆ ಏರಿಕೆಯಾಗಿದ್ದು, ಈವರೆಗೆ 1783 ಜನ ಸೋಂಕಿನಿಂದ ಗುಣಮುಖರಾದರೇ, ಇನ್ನುಳಿದ 1440 ಜನ ಕೋವಿಂಡ್ ಕೇರ್ ಸೆಂಟರ್ ಸೇರಿದ್ದಂತೆ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಜನ ಕೊರೊನಾದಿಂದ ಬಲಿಯಾಗಿದ್ದಾರೆ.