ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಆಟೋ ಚಾಲಕನಿಗೆ ಕೊರೊನಾ ಪಾಸಿಟಿವ್ - ಚಿತ್ರದುರ್ಗ ಕೊರೊನಾ ಸುದ್ದಿ

ನಗರದಲ್ಲಿ 28 ವರ್ಷದ ಆಟೋ ಚಾಲಕನಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ಆಟೋ ಚಾಲಕ ಕೊಪ್ಪಳದ ಗಂಗಾವತಿ‌ ಹಾಗೂ ಸಂಡೂರಿನಲ್ಲಿ ಸುತ್ತಾಡಿದ್ದು‌, ಕಳೆದ 15 ದಿನಗಳ ಹಿಂದೆಯಷ್ಟೇ ಗಂಗಾವತಿಯಲ್ಲಿ ಮದುವೆಯಾಗಿದ್ದು.

ctd
ctd

By

Published : Jul 3, 2020, 4:50 PM IST

ಚಿತ್ರದುರ್ಗ:ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಜನರಲ್ಲಿ ಭಯಯ ವಾತಾವರಣ ನಿರ್ಮಾಣವಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಆಟೋ ಚಾಲಕನೋರ್ವನಿಗೆ ಕೊರೊನಾ‌ ಸೋಂಕು ಧೃಡಪಟ್ಟಿದ್ದು ಜನ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ನಗರದಲ್ಲಿ 28 ವರ್ಷದ ಆಟೋ ಚಾಲಕನಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಆಟೋ ಚಾಲಕ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿಯಾಗಿದ್ದು ಆ ಬಡಾವಣೆಯ ಜನರು ಭಯಭಿತರಾಗಿದ್ದಾರೆ. ಸೋಂಕಿತ ಆಟೋ ಚಾಲಕ ಕೊಪ್ಪಳದ ಗಂಗಾವತಿ‌ ಹಾಗೂ ಸಂಡೂರಿನಲ್ಲಿ ಸುತ್ತಾಡಿದ್ದು‌, ಕಳೆದ 15 ದಿನಗಳ ಹಿಂದೆಯಷ್ಟೇ ಗಂಗಾವತಿಯಲ್ಲಿ ಮದುವೆಯಾಗಿದ್ದು.

ಆಟೋ ಚಾಲಕನಿಗೆ ಕೊರೊನಾ

ಅಲ್ಲಿಯೇ ಆತನಿಗೆ ಟೆಸ್ಟ್ ‌ಮಾಡಲಾಗಿತ್ತು. ಬಳಿಕ ಆತ ಚಿತ್ರದುರ್ಗಕ್ಕೆ ಆಗಿಮಿಸಿದ್ದು, ಇದೀಗ ಆತನಿಗೆ ಕೊರೊನಾ ಧೃಡಪಟ್ಟಿದ್ದು. ಆರೋಗ್ಯ ಇಲಾಖೆ ಮಾಹಿತಿ ಆತನನ್ನು ಕೂಡಲೇ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಿದೆ.

ಆದರೆ ಇಡೀ ಏರಿಯಾದಲ್ಲಿ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದು, ಕೂಡಲೇ ಆರೋಗ್ಯ ಇಲಾಖೆ ಎಲ್ಲರನ್ನು ರ್ಯಾಂಡಮ್ ಆಗಿ ಟೆಸ್ಟ್ ಮಾಡಬೇಕು ಹಾಗೂ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಆತನ‌ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 16 ಮಂದಿಯಲ್ಲಿ ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಸೋಕಿತನಿದ್ದ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.

ABOUT THE AUTHOR

...view details