ಕಾಲೇಜು ಆರಂಭ ಬೆನ್ನಲ್ಲೇ 17 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ - corona positive to students in chitradurga

10:34 November 21
ಚಿತ್ರದುರ್ಗದಲ್ಲಿ ಈವರೆಗೆ 1265 ಜನ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿದ್ದು, 17 ಜನ ವಿದ್ಯಾರ್ಥಿಗಳ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಚಿತ್ರದುರ್ಗ:ನವೆಂಬರ್ 17 ರಿಂದ ಪದವಿ ಕಾಲೇಜುಗಳ ಆರಂಭವಾಗಿವೆ. ಆದರೆ, ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರಬೇಕಿದೆ. ಚಿತ್ರದುರ್ಗದಲ್ಲಿ ಈವರೆಗೆ 1265 ಜನ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿದ್ದು, 17 ಜನ ವಿದ್ಯಾರ್ಥಿಗಳ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಮಕ್ಕಳಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿರುವುದು ಪೋಷಕರ ಆತಂಕಕ್ಕೆ ಕಾರಣ ಆಗಿದೆ. ಪರೀಕ್ಷೆ ಮಾಡಿಸಿದ್ದ ಪದವಿ ಕಾಲೇಜು ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿಲ್ಲ.
ವರದಿ ಪಾಸಿಟಿವ್ ಬಂದಿದ್ದರಿಂದ 17 ಜನ ವಿದ್ಯಾರ್ಥಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಪೀಡಿತ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸಲಾಗಿದೆ ಎಂದು ಚಿತ್ರದುರ್ಗ ಡಿಹೆಚ್ಒ ಡಾ.ಪಾಲಾಕ್ಷರು ಮಾಹಿತಿ ನೀಡಿದರು.