ಚಿತ್ರದುರ್ಗ: ಜಿಲ್ಲೆಯಲ್ಲಿಂದು 38 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,304ಕ್ಕೆ ಏರಿಕೆಯಾಗಿದೆ.
ಇಂದು ವಿವಿಧ ಕೋವಿಡ್ ಆಸ್ಪತ್ರೆಗಳಿಂದ 180 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 11,663 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 59 ಜನರು ಕೊರೊನಾಗೆ ಬಲಿಯಾಗಿದ್ದು, ಒಬ್ಬರು ಇತರೆ ಕಾರಣದಿಂದ ಸಾವನಪ್ಪಿರುವುದು ವರದಿಯಾಗಿದೆ. 582 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 508 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ವರದಿಯಲ್ಲಿ 38 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಶಿವಮೊಗ್ಗದಲ್ಲಿ ಇಂದು 43 ಜನ ಸೋಂಕಿತರು ಪತ್ತೆ: 112 ಜನ ಗುಣಮುಖ.
ಶಿವಮೊಗ್ಗ:ಜಿಲ್ಲೆಯಲ್ಲಿ ಇಂದು 43 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ19.140 ಕ್ಕೆ ಏರಿಕೆಯಾಗಿದೆ. ಇಂದು 112 ಜನ ಗುಣಮುಖರಾಗಿದ್ದು, ಇದುವರೆಗೆ 18,174 ಜನ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಇಂದು ಕೊರೊನಾಗೆ ಓರ್ವ ಬಲಿಯಾಗಿದ್ದು, ಈವರೆಗಿನ ಒಟ್ಟು ಮೃತರ ಸಂಖ್ಯೆ 345 ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 342 ಜನ ಚಿಕಿತ್ಸೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 7,129 ಏರಿಕೆ ಹಾಗಿದೆ. ಇದರಲ್ಲಿ 5.335 ಜೋನ್ ವಿಸ್ತರಣೆಯಾಗಿದೆ.
ತಾಲೂಕುವಾರು ಸೋಕಿತರ ಸಂಖ್ಯೆ:
ಶಿವಮೊಗ್ಗ-12.
ಭದ್ರಾವತಿ-08.
ಶಿಕಾರಿಪುರ-09.
ತೀರ್ಥಹಳ್ಳಿ-05.
ಸೊರಬ-04.
ಸಾಗರ-04.
ಹೊಸನಗರ- 01.
ಇಂದು ಜಿಲ್ಲೆಯಲ್ಲಿ 1,015 ಜನರ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 2,256 ಜನರ ವರದಿ ಬಂದಿದೆ.