ಕರ್ನಾಟಕ

karnataka

ETV Bharat / state

ಚಿತ್ರದುರ್ಗ ಗ್ರಾಮೀಣ ಭಾಗಕ್ಕೆ ಕೊರೊನಾ ಎಂಟ್ರಿ​​... ಎರಡು ಗ್ರಾಮಗಳು ಸೀಲ್​ ಡೌನ್​!​​

ಒಂದೂ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್ ಝೋನ್​ನಲ್ಲಿದ್ದ ಚಿತ್ರದುರ್ಗದ ಮಂದಿಗೆ ಅಹಮದಾಬಾದ್​ನಿಂದ ಆಗಮಿಸಿದ ತಬ್ಲಿಘಿಗಳು ಅಘಾತ ನೀಡಿದ್ದರು. ಇದಾದ ಬಳಿಕ ಚೆನ್ನೈನಿಂದ ಚಳ್ಳಕೆರೆ ಗ್ರಾಮೀಣ ಭಾಗಕ್ಕೆ ಬಂದಿದ್ದ ತಂದೆ-ಮಗಳಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.

ಸೀಲ್​ಡೌನ್​​
ಸೀಲ್​ಡೌನ್​​

By

Published : May 22, 2020, 12:51 PM IST

ಚಿತ್ರದುರ್ಗ: ಚೆನ್ನೈನಿಂದ ಚಳ್ಳಕೆರೆ ಗ್ರಾಮೀಣ ಭಾಗಕ್ಕೆ ಬಂದಿದ್ದ ತಂದೆ-ಮಗಳಲ್ಲಿ ಕೊರೊನಾ ಕಂಡು ಬಂದಿದೆ. ಇದೀಗ ಆ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.

ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮ ಇದೀಗ ಸಂಪೂರ್ಣ ಸೀಲ್​ ಡೌನ್ ಆಗಿದ್ದು, ಕೊರೊನಾ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 42 ಜನರನ್ನು ಜಿಲ್ಲಾಡಳಿತ‌ ಕ್ವಾರಂಟೈನ್ ಮಾಡಿದೆ. ಚೆನ್ನೈನಿಂದ ಮೇ 5ರಂದು ಬಂದಿದ್ದ ಕೋಡಿಹಳ್ಳಿ ಗ್ರಾಮದ P-993 ಹೆಣ್ಣು (3 ವರ್ಷ) ಹಾಗೂ P -994 (29) ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ ಕೋಡಿಹಳ್ಳಿ ಹಾಗೂ ಚಿಕ್ಕೆಹಳ್ಳಿಗಳನ್ನು ಜಿಲ್ಲಾಡಳಿತ ಸೀಲ್​ ಡೌನ್ ಮಾಡಿದೆ.

ಸೀಲ್​ ಡೌನ್ ಕುರಿತು ಮಾತನಾಡಿದ ಶಾಸಕ ಟಿ.ರಘುಮೂರ್ತಿ

ಈ ಕುರಿತು ಮಾತನಾಡಿದ ಶಾಸಕ ಟಿ.ರಘುಮೂರ್ತಿ ಚಿಕ್ಕೆಹಳ್ಳಿಯಲ್ಲಿ ಆಂಧ್ರದ ಕಡೆಯಿಂದ ಜನ ಬರಬಹುದು ಎನ್ನುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನಿಂದ ಲಾಕ್​​ಡೌನ್ ಪಾಲನೆ ಮಾಡಿದ್ರೂ ಈಗ ಕೊರೊನಾ ಸೋಂಕು ಬಂದಿರೋದು ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದರು.

ABOUT THE AUTHOR

...view details