ಚಿತ್ರದುರ್ಗ: ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಇದರಿಂದ ಜನರು ಪೂಜೆ ಹಾಗೂ ಯಜ್ಞ-ಯಾಗಾದಿಗಳನ್ನು ಮಾಡಿದ್ರೆ, ಇತ್ತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕನೋರ್ವ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ತೇರಿಗೆ ಎಸೆಯುವ ಮೂಲಕ ದೇವರ ಮೊರ ಹೋಗಿದ್ದಾನೆ.
'ಕೊರೊನಾ ಭಾರತ ಬಿಟ್ಟು ತೊಲಗು', ಇದು ಕೋಟೆನಾಡಿನ ಯುವಕನ ಪ್ರಾರ್ಥನೆ - ಯುವಕನೋರ್ವ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು
ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಕಬಂಧಬಾಹು ಚಾಚುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಇದರಿಂದ ಜನರು ಪೂಜೆ ಹಾಗೂ ಯಜ್ಞ-ಯಾಗಾದಿಗಳನ್ನು ಮಾಡಿದ್ರೆ, ಇತ್ತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕನೋರ್ವ 'ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು' ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ರಥದ ಕಳಸಕ್ಕೆ ತೂರಿದ್ದಾರೆ.
ಕೊರೊನಾ ಭಾರತ ಬಿಟ್ಟು ತೊಲಗು, ಇದು ಕೋಟೆನಾಡಿನ ಯುವಕನ ಪ್ರಾರ್ಥನೆ..!
ಹೊಳಲ್ಕೆರೆ ತಾಲೂಕಿನ ಎನ್.ಜಿ. ಹಳ್ಳಿಯಲ್ಲಿ ಇತ್ತೀಚೆಗೆ ಜರುಗಿದ ಶ್ರೀಮುತ್ತಿನ ಕುಮಾರಿ ದೇವಿ ಜಾತ್ರೆಯಲ್ಲಿ ತೇರಿಗೆ ಬಾಳೆ ಹಣ್ಣು ಎಸೆದು ಪ್ರಾರ್ಥಿಸಿದ್ದಾನೆ. ಇದೇ ಗ್ರಾಮದ ನಿವಾಸಿ ಪ್ರದೀಪ್ ಎಂಬಾತ ತೇರಿಗೆ ಬಾಳೆ ಹಣ್ಣು ತೂರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
TAGGED:
ಜನರು ಪೂಜೆ ಹಾಗೂ ಯಜ್ಞ-ಯಾಗಾದಿ