ಚಿತ್ರದುರ್ಗ:ಲಾಕ್ಡೌನ್ ತೆರವಿನಿಂದ ಜನ ಕೊರೊನಾ ಇಲ್ಲವೆಂದು ಭಾವಿಸಿದ್ದು, ಪ್ರಾರಂಭದಲ್ಲಿ ಇದ್ದಿದ್ದಕ್ಕಿಂತ ನೂರರಷ್ಟು ಕೊರೊನಾ ಹೆಚ್ಚಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಮೊದಲಿಗಿಂತ ನೂರರಷ್ಟು ಕೊರೊನಾ ಜಾಸ್ತಿಯಾಗಿದೆ: ಸಚಿವ ಬಿ.ಸಿ.ಪಾಟೀಲ್ - Corona Latest News
ಕೊರೊನಾ ತಡೆಗಟ್ಟಲು ಇನ್ನೊಮ್ಮೆ ಲಾಕ್ಡೌನ್ ಮಾಡಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಆಗುವ ಸಾಧ್ಯತೆ ಇಲ್ಲ. ಲಾಕ್ಡೌನ್ ಆಗಬಾರದು, ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾತ್ರ ಪರಿಹಾರವಲ್ಲ ಎಂದಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಆಗುವ ಸಾಧ್ಯತೆ ಇಲ್ಲ. ಲಾಕ್ಡೌನ್ ಆಗಬಾರದು, ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾತ್ರ ಪರಿಹಾರ ಅಲ್ಲ. ಮೊದಲಿಗಿಂತಲೂ ಕೊರೊನಾ ನೂರರಷ್ಟು ಹೆಚ್ಚಾಗಿದೆ. ನಮ್ಮ ಜೀವ ನಮ್ಮ ಕೈಯಲ್ಲಿದೆ. ನಿಯಮ ಪಾಲಿಸುವುದೇ ಪರಿಹಾರ ಎಂದು ಸಲಹೆ ನೀಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಗುಂಡಿಯಲ್ಲಿ ಎಸೆಯುತ್ತಿರುವ ದೃಶ್ಯ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬದುಕಿದವರಿಗೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವವನ್ನು ಸತ್ತವರಿಗೂ ಕೊಡುವುದು ಭಾರತೀಯ ಸಂಸ್ಕೃತಿ. ಈ ಘಟನೆ ಅಮಾನವೀಯವಾಗಿದೆ. ಯಾರು ಈ ಕೃತ್ಯ ನಡೆಸಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದರು.