ಚಿತ್ರದುರ್ಗ :ಕರ್ನಾಟಕದಲ್ಲಿರುವ ಬಂಡೆ, ಗೋಡೆ, ಬೆಟ್ಟಗಳನ್ನು ಸ್ಪೈಡರ್ಮ್ಯಾನ್ನಂತೆ ಕಣ್ಣುಮಿಟುಕಿಸುವಷ್ಟರಲ್ಲಿ ಏರಬಲ್ಲ ಛಲಗಾರ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್. ಈತ ನಿತ್ಯವೂ ದೊಡ್ಡ ದೊಡ್ಡ ಬಂಡೆಗಳನ್ನು ಏರುವ ಜೊತೆಗೆ ಕಠಿಣ ಪರಿಶ್ರಮದಿಂದ ತಾಲೀಮು ಮಾಡ್ತಿದ್ದಾನೆ.
ಇನ್ನು ಅಮೆರಿಕಾದ ಪ್ರಸಿದ್ಧ ಏಂಜಲ್ಸ್ ಫಾಲ್ಸ್ ಏರುವ ಕನಸು ಕಂಡ ಈತನಿಗೆ ಕೆಲ ಅಡೆತಡೆಗಳು ಬಂದಿವೆ. ಅಲ್ಲದೆ ಕೊರೊನಾ ವಕ್ಕರಿಸಿದ ದಿನಗಳಿಂದ ಜ್ಯೋತಿರಾಜನಿಗೆ ಅಮೆರಿಕಾಗೆ ಹೋಗಲು ವೀಸಾ ಸಿಗುತ್ತಿಲ್ಲ. ಪೂರ್ವ ಸಿದ್ಧತೆ ನಡೆಸಲು ಪ್ರೋತ್ಸಾಹಕರು ಸಿಗುತ್ತಿಲ್ಲ ಎಂದು ಈಟಿವಿ ಭಾರತ ಮುಖಾಂತರ ಅಳಲು ತೋಡಿಕೊಂಡಿದ್ದಾರೆ.
ವೆನುಜುವೆಲಾದ ಏಂಜೆಲ್ಸ್ ಫಾಲ್ಸ್ ಹತ್ತಬೇಕು ಎಂದು ರಾಜ್ಯ, ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ್ ಫಾಲ್ಸ್ ಏರಿ ತಾಲೀಮು ನಡೆಸುತ್ತಿದ್ದಾರೆ. ಈ ಮೊದಲೇ ಏಂಜೆಲ್ಸ್ ಫಾಲ್ಸ್ ಹತ್ತಲು ಸಿದ್ಧತೆ ಮಾಡಿಕೊಂಡ ಜ್ಯೋತಿರಾಜ್ಗೆ, ಕೊರೊನಾ ವೈರಸ್ ಅಡ್ಡಿಪಡಿಸಿತ್ತು.
ಹೀಗಾಗಿ, ಅಮೆರಿಕಾಗೆ ತೆರಳಲು ಸರ್ಕಾರ ಕೋತಿರಾಜ್ಗೆ ವೀಸಾ ಹಾಗೂ ಅಗತ್ಯ ನೆರವು ಕೊಡಬೇಕಾಗಿದೆ. ಮುಂಬರುವ ಯುಗಾದಿ ಹಬ್ಬದೊಳಗಾಗಿ ಅಮೆರಿಕಾದ ಏಂಜೆಲ್ಸ್ ಫಾಲ್ಸ್ ಏರಿ ಸಾಹಸ ಮೆರೆದು ರಾಜ್ಯ ಹಾಗೂ ದೇಶದ ಹಿರಿಮೆ ಹೆಚ್ಚಿಸುವ ಕನಸು ಕಂಡಿದ್ದಾನೆ.