ಚಿತ್ರದುರ್ಗ: ಕೊರೊನಾ ವೈರಸ್ ಭೀತಿಯಿಂದ ಪೊಲೀಸರು ಮದುವೆ ಮಂಟಪ ಖಾಲಿ ಮಾಡಿಸಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಮದುವೆ ಮಂಟಪವನ್ನೇ ಖಾಲಿ ಮಾಡಿಸಿದ ಪೊಲೀಸ್ರು ಧಾರವಾಡ ಮೂಲದ ವಧು ಸ್ನೇಹಾರೊಂದಿಗೆ ಬಳ್ಳಾರಿಯ ಅಮರೇಶ ವಿವಾಹ ಆಯೋಜಿಸಲಾಗಿತ್ತು. ಅಮರೇಶ್ ಕೆನಡಾ ದೇಶದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಹೋಗಿದ್ದರು. ಮದುವೆ ಹಿನ್ನೆಲೆಯಲ್ಲಿ ಕಳೆದ 06 ದಿನಗಳ ಹಿಂದೆಯಷ್ಟೇ ಸ್ವದೇಶಕ್ಕೆ ಆಗಮಿಸಿದ್ದಾರೆ.
ಜಿಲ್ಲಾಡಳಿತ ಯಾರೇ ವಿದೇಶದಿಂದ ಬಂದರೂ ಕೂಡ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದೆ. ಆದ್ರೆ ಅಮರೇಶ್ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಪೊಲೀಸರು, ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಜನರನ್ನು ವೇದಿಕೆಯಿಂದ ದೂರ ಇಟ್ಟು ಮದುವೆ ಮಾಡಿಸಿದ್ದಾರೆ.
ವಧು-ವರರಿರುವ ವೇದಿಕೆ ಮೇಲೆ ಯಾರು ಬಾರದಂತೆ ಬ್ಯಾರಿಕೇಡ್ ರೀತಿ ಕಾವಲು ಹಾಕಿ ಸಂಬಂಧಿಕರು ದೂರದಿಂದಲೇ ಶುಭಕೋರುವಂತೆ ವ್ಯವಸ್ಥೆ ಮಾಡಲಾಯಿತು. ಬಳಿಕ ಸರ್ಕಾರದ ಅದೇಶದ ಪ್ರಕಾರ ಪೊಲೀಸರು ಮದುವೆ ಮಂಟಪದಿಂದ ಜನರನ್ನು ಖಾಲಿ ಮಾಡಿಸಿದರು.