ಕರ್ನಾಟಕ

karnataka

ETV Bharat / state

ಕೋವಿಡ್ ಕೇರ್ ಕೇಂದ್ರಕ್ಕೆ ಕಾಲ್ನಡಿಗೆಯಲ್ಲೇ ಬಂದ‌ ಸೋಂಕಿತ: ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆ್ಯಂಬುಲೆನ್ಸ್ ಕೊರತೆ!? - ಚಿತ್ರದುರ್ಗ ಲೇಟೆಸ್ಟ್​ ನ್ಯೂಸ್​

ಆರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರದಲ್ಲೇ ಸೋಂಕಿತರನ್ನು ಕರೆತರಲು ಆ್ಯಂಬುಲೆನ್ಸ್ ಕೊರತೆ ಇದೆಯಾ ಎಂಬ ಶಂಕೆ ಮೂಡಿದೆ. ಸೋಂಕಿತ ಯುವಕ ಆ್ಯಂಬುಲೆನ್ಸ್​​ ಬರುವ ಮುನ್ನವೇ ಕೋವಿಡ್​ ಕೇಂದ್ರಕ್ಕೆ ಕಾಲ್ನಡಿಗೆಯಲ್ಲೇ ಬಂದಿದ್ದಾರೆ.

covid center
ಕೋವಿಡ್ ಕೇರ್ ಕೇಂದ್ರಕ್ಕೆ ನಡೆದುಕೊಂಡೇ ಬಂದ‌ ಸೋಂಕಿತ

By

Published : Jul 13, 2020, 12:42 PM IST

ಚಿತ್ರದುರ್ಗ:ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇಲ್ಲದೇ ಕೋವಿಡ್ ಕೇರ್ ಕೇಂದ್ರಕ್ಕೆ ಸೋಂಕಿತನೋರ್ವ ನಡೆದುಕೊಂಡು ಬಂದಿರುವ ಘಟನೆ ಆರೋಗ್ಯ ಸಚಿವರ ಸ್ವ ಕ್ಷೇತ್ರವಾದ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಶ್ರೀರಾಮುಲು ಕ್ಷೇತ್ರದಲ್ಲೇ ಸೋಂಕಿತರನ್ನು ಕರೆತರಲು ಆ್ಯಂಬುಲೆನ್ಸ್ ಕೊರತೆ ಇದೆಯಾ ಎಂಬ ಶಂಕೆ ಮೂಡಿದೆ. ಆದ್ರೆ ಸೋಂಕಿತ ಯುವಕ ಆ್ಯಂಬುಲೆನ್ಸ್​​ ಬರುವ ಮುನ್ನವೇ ಕೋವಿಡ್​ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ.

ಕೋವಿಡ್ ಕೇರ್ ಕೇಂದ್ರಕ್ಕೆ ನಡೆದುಕೊಂಡೇ ಬಂದ‌ ಸೋಂಕಿತ...!

ಇದೀಗ ಸೋಂಕಿತ ಯುವಕ ಕೋವಿಡ್​ ಕೇರ್​ ಸೆಂಟರ್​ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.

ABOUT THE AUTHOR

...view details