ಚಿತ್ರದುರ್ಗ:ಲಾಕ್ಡೌನ್ ಸಡಿಲಗೊಂಡರೂ ಕೊರೊನಾ ಭಯದಿಂದಾಗಿ, ಜನರು ಆಟೋಗಳತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಆಟೋ ಚಾಲಕರಿಗೆ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.
ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7 ಸಾವಿರದ ಗಡಿ ದಾಟುತ್ತಿದ್ದು, ಜನರು ಆಟೋ ರಿಕ್ಷಾ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.

ಆಟೋ ಚಾಲಕರು ಜೀವನ ನಿರ್ವಹಣೆ ಮಾಡುವಷ್ಟು ದುಡಿಮೆ ಇಲ್ಲದೆ, ಸಾಲದ ಹಣ ಪಾವತಿಸಲು ಹಣವಿಲ್ಲದೆ ಹೈರಾಣಾಗಿದ್ದಾರೆ. ತಿಂಗಳ ಇಎಮ್ಐ ಸೇರಿದಂತೆ ಬೇರೆ ಮನೆಯ ಖರ್ಚಿಗೂ ಹಣ ಇಲ್ಲದೆ ಪರದಾಡುವಂತಾಗಿದೆ.
ಆಟೋ ಚಾಲಕರಿಗೆ ಕೊರೊನಾ ಪರಿಹಾರವಾಗಿ ರಾಜ್ಯ ಸರ್ಕಾರ ಐದು ಸಾವಿರ ರೂಪಾಯಿ ಘೋಷಣೆ ಮಾಡಿದೆ. ಆದರೆ ಅದು ಇನ್ನೂ ಮರೀಚಿಕೆಯಂತಾಗಿದ್ದು, ದಿನನಿತ್ಯ ದುಡಿಮೆ ಇಲ್ಲದೆ ಸರ್ಕಾರದ ನೆರವಿಗಾಗಿ ಆಟೋ ಚಾಲಕರು ಕಾಯುತ್ತಿದ್ದಾರೆ.