ಕರ್ನಾಟಕ

karnataka

ETV Bharat / state

ಹೋರಾಟದ ಮೂಲಕ ವೇತನ ಪಡೆಯಲು ಮುಂದಾದ ಹೊರಗುತ್ತಿಗೆ ನೌಕರರು

ಕೋಟೆನಾಡು ಚಿತ್ರದುರ್ಗದ ಹೊರಗುತ್ತಿಗೆ ನೌಕರರು ವೇತನಕ್ಕಾಗಿ ಬೀದಿಗೆ ಬಂದು ಹೋರಾಟದ‌ ಮೂಲಕ ವೇತನ ದಕ್ಕಿಸಿಕೊಳ್ಳಲು ಮುಂದಾಗಿದ್ದಾರೆ.

chitradurga
ಹೊರಗುತ್ತಿಗೆ ನೌಕರರಿಂದ ಹೋರಾಟ

By

Published : Oct 22, 2020, 8:10 PM IST

ಚಿತ್ರದುರ್ಗ: ಅವರು ಜೀವನ ನಡೆಸಲು ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದವರು. ಆದರೆ ಇದೀಗ ಅವರ ಬದುಕು ಬೀದಿಗೆ ಬಂದಿದ್ದು, ವೇತನ ಇಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಇದಕ್ಕೆ ಕೋಟೆನಾಡು ಚಿತ್ರದುರ್ಗದ ಹೊರಗುತ್ತಿಗೆ ನೌಕರರು ವೇತನಕ್ಕಾಗಿ ಬೀದಿಗೆ ಬಂದು ಹೋರಾಟದ‌ ಮೂಲಕ ವೇತನ ದಕ್ಕಿಸಿಕೊಳ್ಳಲು ಮುಂದಾಗಿದ್ದಾರೆ.

ವೇತನಕ್ಕಾಗಿ ಬೀದಿಗೆ ಬಂದು ಹೋರಾಟದ‌ ಮೂಲಕ ವೇತನ ಪಡೆಯಲು ಮುಂದಾದ ಹೊರಗುತ್ತಿಗೆ ನೌಕರರು.

ಕೋಟೆನಾಡು ಚಿತ್ರದುರ್ಗದಲ್ಲಿ ಸರಿಸುಮಾರು 900ಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಆಧಾರದ ಮೇಲೆ ತಮ್ಮ ಸೇವೆ ಸಲ್ಲಿಸಿತ್ತಿದ್ದು, 09 ತಿಂಗಳಿಂದ ವೇತನ ಇಲ್ಲದೇ ಜೀವನದ ಬಂಡಿ ಸಾಗಿಸಲು ಕಷ್ಟಕರವಾಗಿದೆ. ಲಾಕ್​ಡೌನ್ ಜಾರಿಯಾಗುವ ಮುನ್ನವೇ ವೇತನ ಇಲ್ಲದೇ ಹೈರಾಣಾಗಿರುವ ಹೊರಗುತ್ತಿಗೆ ನೌಕರರು ಇದೀಗ ಹೋರಾಟದ ಮುಖೇನ ವೇತನ ಗಿಟ್ಟಿಸಿಕೊಳ್ಳಲು ತೀರ್ಮಾನಿಸಿ ಬೀದಿಗೆ ಬಂದಿದ್ದಾರೆ.

ವೇತನ ಇಲ್ಲದೇ ರೋಸಿ ಹೋಗಿರುವ ನೌಕರರಿಗೆ ಈ ಮೊದಲೇ ಲಾಕ್​ಡೌನ್ ಆಗುವ ಮುನ್ನವೇ ಸಂಬಂಧ ಪಟ್ಟ ಇಲಾಖೆಗಳು ವೇತನ ನೀಡಿಲ್ಲವಂತೆ. ಬಳಿಕ ಕೊರೊನಾ ನಿಯಂತ್ರಿಸುವ ಸಲುವಾಗಿ ಲಾಕ್​ಡೌನ್ ಆಗಿದ್ದರಿಂದ ಕೆಲಸಕ್ಕೆ ಬರಬೇಡಿ ಎಂದು ಅಧಿಕಾರಿ ‌ವರ್ಗ ಖಡಾಖಂಡಿತವಾಗಿ ತಿಳಿಸಿದ್ದರಂತೆ. ಇದರಿಂದ‌ 9 ತಿಂಗಳ ಇವರ ವೇತನ ಮಾತ್ರ‌ ಮರೀಚಿಕೆಯಾಗಿದೆ. ವೇತನ ಇಲ್ಲದೇ ಮನೆಯಲ್ಲಿ ಜೀವನ ನಡೆಸಲು ಅವಶ್ಯಕವಾಗಿರುವ ಪಡಿತರ, ಮನೆ ಬಾಡಿಗೆ, ಮಕ್ಕಳ‌ ಶಾಲೆಗೆ ಪಾವತಿಸಲು ಹಣ ಬೇಕೆ ಬೇಕಾಗಿದೆ. ಆದ್ರೆ ನಮ್ಮ ಬಳಿ ಹಣ ಇಲ್ಲ ಇತ್ತ ಸರ್ಕಾರಕ್ಕೆ ವೇತನ ನೀಡುವಂತೆ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜ ಆಗಿಲ್ಲ ಎಂದು ಹೊರಗುತ್ತಿಗೆ ನೌಕರರು ತಿಳಿಸಿದ್ದಾರೆ.‌

ಇನ್ನು ಲಾಕ್​ಡೌನ್ ಮುನ್ನವೇ ವೇತನ ಬಾರದೇ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದ್ದಾರಂತೆ. ಇದರಿಂದ ಬೇರೆ ಕಡೆ ಕೆಲಸಕ್ಕೆ ತೆರಳಿದರೆ ಲಾಕ್​​​ಡೌನ್ ಹಾಗೂ ಕೊರೊನಾ ಸಂದರ್ಭದಲ್ಲಿ ಕೆಲಸ ಸಿಗದೇ‌ ಇರುವುದು ಮತ್ತಷ್ಟು ಹೈರಾಣಾಗಿಸಿದೆ. ಈಗಾಗಲೇ ಸಮಾಜಕಲ್ಯಾಣ ಇಲಾಖೆಯಲ್ಲಿ 300 ಜನ, ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿ 400 ಜ‌ನ, ಅಲ್ಪಸಂಖ್ಯಾತರ ಇಲಾಖೆಯಲ್ಲಿ 150 ಜನರಿಗೆ ಎಂಟು ತಿಂಗಳ ವೇತನವನ್ನು ಸರ್ಕಾರ ಮಂಜೂರು ಮಾಡಬೇಕಿದೆ.

ABOUT THE AUTHOR

...view details