ಚಿತ್ರದುರ್ಗ: ಸಂಸದ ಜಿ ಎಂ ಸಿದ್ದೇಶ್ವರ್ ಅವರ ಕಾರು ಚಾಲಕ ಸ್ವಂತ ಅತ್ತಿಗೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಕಿರುಕುಳ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಸಂಸದರ ಕಾರು ಚಾಲಕನಿಂದ ನಿರಂತರ ಕಿರುಕುಳ ಆರೋಪ: ಬೇಸತ್ತ ಅತ್ತಿಗೆ ನೇಣಿಗೆ ಶರಣು - ಚಿತ್ರದುರ್ಗ ಅಪರಾಧ ಸುದ್ದಿ
ಸಂಸದ ಜಿ ಎಂ ಸಿದ್ದೇಶ್ವರ್ ಅವರ ಕಾರ್ ಡ್ರೈವರ್ ತನ್ನ ಅತ್ತಿಗೆಗೆ ಕಿರುಕುಳು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಿರುಕುಳದಿಂದ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ನೇಣಿಗೆ ಶರಣಾದ ಅತ್ತಿಗೆ
ಜ್ಯೋತಿ (35) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ದಾವಣಗೆರೆ ಜಿಲ್ಲೆಯ ಸಂಸದ ಜಿ ಎಂ ಸಿದ್ದೇಶ್ವರ್ ಅವರ ಕಾರು ಚಾಲಕ ಪ್ರಭು ತನ್ನ ಅತ್ತಿಗೆ ಜ್ಯೋತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗ್ತಿದೆ. ಮೃತಜ್ಯೋತಿಪ್ರಭುವಿನ ಸಹೋದರ ಮಹಾಲಿಂಗಪ್ಪನ ಪತ್ನಿ ಎಂದು ತಿಳಿದುಬಂದಿದೆ. ಕಿರುಕುಳದಿಂದ ಬೇಸತ್ತು ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಾಣಾಗಿದ್ದಾಳೆ.
ಈ ಸಂಬಂಧ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.