ಕರ್ನಾಟಕ

karnataka

ETV Bharat / state

ಚಳ್ಳಕೆರೆ ನಗರಸಭೆ ಚುನಾವಣೆ ಅಧಿಕಾರದ ಗದ್ದುಗೆ ಕಾಂಗ್ರೆಸ್ ತೆಕ್ಕೆಗೆ - Congress won in Challakere municipal election

ಕಾಂಗ್ರೆಸ್ ಪಕ್ಷಕ್ಕೆ ಚಳ್ಳಕೆರೆ ನಗರಸಭೆಯ ಆಡಳಿತದ ಚುಕ್ಕಾಣಿ ಧಕ್ಕಿದ್ದರಿಂದ ಶಾಸಕ ಟಿ ರಘುಮೂರ್ತಿ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರನ್ನು ಹಾಗೂ ಎಲ್ಲ ನಗರಸಭೆ ಸದಸ್ಯರುಗಳಿಗೆ ಅಭಿನಂದಿಸಿದರು..

Congress won in Challakere municipal election
ಚಳ್ಳಕೆರೆ ನಗರಸಭೆ ಚುನಾವಣೆ ಅಧಿಕಾರದ ಗದ್ದುಗೆ ಕಾಂಗ್ರೆಸ್ ತೆಕ್ಕೆಗೆ

By

Published : Nov 3, 2020, 5:37 PM IST

Updated : Nov 3, 2020, 6:55 PM IST

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ಜಯಲಕ್ಷ್ಮಿ ಕೃಷ್ಣಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೈತುನ್ ಬೀ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಗರಸಭೆಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಕಾಂಗ್ರೆಸ್​ನ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅಭಿನಂದಿಸಿದರು. ನಗರಸಭೆಯಲ್ಲಿ ಒಟ್ಟು 31 ಸ್ಥಾನದ ಬಲವಿದ್ದು, ಅದರಲಲ್ಲಿ 16 ಸ್ಥಾನಗಳು ಕೈ ಪಕ್ಷದ ಪಾಲಾದ್ರೆ, ಜೆಡಿಎಸ್ ಪಕ್ಷ 10 ಸ್ಥಾನಗಳನ್ನು ಪಡೆದು 2ನೇ ಸ್ಥಾನ ಅಲಂಕರಿಸಿತು.

ಚಳ್ಳಕೆರೆ ನಗರಸಭೆ ಚುನಾವಣೆ

ಬಿಜೆಪಿ 4 ಸ್ಥಾನಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು. ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್​​ನ 16 ಸ್ಥಾನಗಳು, ಶಾಸಕ ಟಿ.ರಘುಮೂರ್ತಿ ಅವರ ಒಂದು ಮತ ಸೇರಿ ಒಟ್ಟು 17 ಮತಗಳು ಲಭಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಗಾದಿ ಕಾಂಗ್ರೆಸ್ ಪಾಲಾಯಿತು.

ಶಾಸಕ ಟಿ ರಘುಮೂರ್ತಿ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರನ್ನು, ಎಲ್ಲ ನಗರಸಭೆ ಸದಸ್ಯರುಗಳಿಗೆ ಅಭಿನಂದಿಸಿದರು.

Last Updated : Nov 3, 2020, 6:55 PM IST

ABOUT THE AUTHOR

...view details