ಚಿತ್ರದುರ್ಗ: ವಿದ್ಯಾಕ್ಷೇತ್ರವನ್ನು ವಿದ್ಯಾರ್ಥಿಗಳಿಗೆ ಹಾಗು ಜನರಿಗೆ ಇಷ್ಟವಾಗುವ ರೀತಿ, ಅವರು ಒಪ್ಪುವಂತೆ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಚಿವ ಹೆಚ್ಎಮ್ ರೇವಣ್ಣ ತಿಳಿಸಿದರು.
ವಿದ್ಯಾಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದಿರುವುದು ಕಾಂಗ್ರೆಸ್ ಪಕ್ಷ: ಹೆಚ್ಎಮ್ ರೇವಣ್ಣ - ಶಿಕ್ಷಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾತ್ರ
ಶಿಕ್ಷಣ ಕ್ಷೇತ್ರದಲ್ಲಿ ಹಾಗು ಶಿಕ್ಷಕರ ಪರವಾಗಿ ಧ್ವನಿ ಎತ್ತುವವನೇ ಉತ್ತಮ ವಾಗ್ಮೀ ಹಾಗು ಸಂಸದೀಯ ಪಟು. ಈ ವಿದ್ಯಾ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಚಿವ ಹೆಚ್ಎಮ್ ರೇವಣ್ಣ ತಿಳಿಸಿದರು.
![ವಿದ್ಯಾಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದಿರುವುದು ಕಾಂಗ್ರೆಸ್ ಪಕ್ಷ: ಹೆಚ್ಎಮ್ ರೇವಣ್ಣ HM Revanna](https://etvbharatimages.akamaized.net/etvbharat/prod-images/768-512-9295292-thumbnail-3x2-ctddsd.jpg)
ನಗರದಲ್ಲಿ ಆಗ್ನೇಯ ಪದವಿದರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹಾಗು ಶಿಕ್ಷಕರ ಪರವಾಗಿ ಧ್ವನಿ ಎತ್ತುವವನೇ ಉತ್ತಮ ವಾಗ್ಮೀ ಹಾಗು ಸಂಸದೀಯ ಪಟು. ಈ ವಿದ್ಯಾ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
ವೀರಪ್ಪ ಮೊಯ್ಲಿರವರ ಅಧಿಕಾರಾವಧಿಯಲ್ಲಿ ಶಿಕ್ಷಕರನ್ನು ನೇರ ನೇಮಕಾತಿ ಮಾಡಿ ನೇಮಕಾತಿ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿತ್ತು. ಸರ್ವಶಿಕ್ಷಣ ಅಭಿಯಾನ, ಬಿಸಿಯೂಟ ಕಾರ್ಯಕ್ರಮಗಳನ್ನು ನೀಡಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ಆಗ್ನೇಯ ಪದವೀಧರರ ಕ್ಷೇತ್ರದ ನಮ್ಮ ಅಭ್ಯರ್ಥಿ ರಮೇಶ್ ಬಾಬು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು, ಅಭ್ಯರ್ಥಿಗೆ ಒಳ್ಳೆಯ ಬೆಂಬಲ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.