ಕರ್ನಾಟಕ

karnataka

ETV Bharat / state

ಕೋಟೆನಾಡಲ್ಲಿ ಶ್ರೀ ರಾಮುಲುಗೆ ಪ್ರತಿಭಟನೆ ಬಿಸಿ: ಯೂತ್ ಕಾಂಗ್ರೆಸ್​ನಿಂದ ಪ್ರತಿಭಟನೆ ಬಿಸಿ - ಶ್ರೀರಾಮುಲು ವಿರುದ್ಧ ಕಾಂಗ್ರೆಸ್​ ಕಾರ್ಯರ್ತರ ಪ್ರತಿಭಟನೆ

ಕೋಟೆನಾಡು ಚಿತ್ರದುರ್ಗದಲ್ಲಿ ಆರೋಗ್ಯ ಸಚಿವ ಶ್ರೀರಾಮುಲುಗೆ ಪ್ರತಿಭಟನೆಯ ಸ್ವಾಗತ ದೊರೆತಿದೆ.

ಶ್ರೀ ರಾಮುಲು ವಿರುದ್ಧ ಕಾಂಗ್ರೆಸ್

By

Published : Oct 18, 2019, 5:44 PM IST

ಚಿತ್ರದುರ್ಗ:ಮೊದಲ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಆಗಮಿಸಿದ ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.

ಯುವ ಕಾಂಗ್ರೆಸ್​​ನಿಂದ ಪ್ರತಿಭಟನೆ

ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ನೆರೆ ಪರಿಹಾರಕ್ಕಾಗಿ ಒತ್ತಾಯಿಸಿದರು‌. ನೆರೆ ಪರಿಹಾರ ವಿಚಾರದಲ್ಲಿ ವಿಳಂಬ ಧೋರಣೆ ವಿರೋಧಿಸಿ ಪ್ರತಿಭಟಿಸಿದ ಪ್ರತಿಭನಕಾರರನ್ನು ಮನವೊಲಿಸಲು ಸಚಿವ ಶ್ರೀ ರಾಮುಲು ಮುಂದಾದ್ರು ಕೂಡ ಪ್ರಯತ್ನ ವಿಫಲವಾಯಿತು. ಕೈ ಕಾರ್ಯಕರ್ತರು ಶ್ರೀ ರಾಮುಲು ವಿರುದ್ಧ ಘೋಷಣೆ ಕೂಗುತ್ತಿದ್ದಂತೆ, ಇತ್ತಾ ಅಭಿಮಾನಿಗಳು ಶ್ರೀ ರಾಮುಲು ಪರ ಘೋಷಣೆ ಹಾಕಿದರು.

ನಂತರ ಗದ್ದಲ ಜೋರಾದಂತೆ ಪೋಲಿಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಇನ್ನೂ ಗದ್ದಲ ಜೋರಾಗಿದ್ದಕ್ಕೆ ಶ್ರೀ ರಾಮುಲು ಪ್ರತಿಭಟನಾಕಾರರ ಮನವಿ ಸ್ವೀಕರಿಸದೇ ತೆರಳಿದರು.

For All Latest Updates

TAGGED:

ABOUT THE AUTHOR

...view details