ಚಳ್ಳಕೆರೆ(ಚಿತ್ರದುರ್ಗ):ಕರ್ತವ್ಯಕ್ಕೆ ಹೋಗುವ ಮುನ್ನವೇ ಬಸ್ ನಿಲ್ದಾದಲ್ಲಿ ಅಧಿಕಾರಿಯೊಬ್ಬ ಮದ್ಯ ಸೇವಿಸಿ ಮತ್ತಿನಲ್ಲಿ ತೇಲಾಡುವ ದೃಶ್ಯ ಕಂಡು ಬಂದಿದೆ. ಚಳ್ಳಕೆರೆ ತಾಲೂಕಿನ ಬೇಡರೆಡ್ಡಿ ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಸ್. ಹನುಮಂತ ಕುಮಾರ್ ಮದ್ಯ ಸೇವಿಸಿದ ಅಧಿಕಾರಿ. ಗ್ರಾಪಂ ಕಚೇರಿಗೆ ಕರ್ತವ್ಯಕ್ಕೆ ಹೋಗಲು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11-15ರ ಸಮಾರಿಗೆ ಬಂದಿದ್ದಾರೆ. ಮದ್ಯ ಸೇವಿಸಿದ ಅಮಲಿನಲ್ಲಿ ಬಸ್ ನಿಲ್ದಾಣದಲ್ಲಿ ಮಲಗಿರುವುದು ಕಂಡು ಬಂದಿದೆ. ಸ್ಥಳೀಯರು ಕಂಡು ಎಚ್ಚರಿಸಿದಾಗ ಅಮಲಿನಲ್ಲಿ ತೂರಾಡಿ ಕೊಂಡು ಕಚೇರಿಗೆ ಹೋಗಿದ್ದಾರೆ ಎನ್ನಲಾಗಿದೆ.
ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ ವಾಹನ ಬಳಕೆ ಮಾಡದೇ, ಜನ ಸಂಜೀವಿನ ಕ್ರಿಯಾ ಯೋಜನೆ ತಯಾರಿಸದೇ ಇರುವುದು, ಪದೇ ಪದೆ ಕರ್ತವ್ಯಕ್ಕೆ ಗೈರು ಸೇರಿದಂತೆ ವಿವಿಧ ಕಾರಣಕ್ಕೆ 17-9-2022ರಂದು ತಾಲೂಕು ಪಂಚಾಯತ್ ಕಾರ್ಯಾಲಯದಿಂದ ನೋಟಿಸ್ ಜಾರಿಮಾಡಲಾಗಿತ್ತು. ಆದರೆ, ತಾಲೂಕು ಪಂಚಾಯತ್ ಚಾರಿ ಮಾಡಿದ್ದ ನೋಟಿಸ್ಗೆ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಪೂರ್ವಾನುಮತಿ ಪಡೆಯದೇ ಪದೇ ಪದೆ ಅನಧಿಕೃತವಾಗಿ ಗೈರು ಹಾಜರರಾಗುತ್ತಿದ್ದರು ಎನ್ನಲಾಗಿದೆ. 23-9-2022 ರಂದು ಎಸ್. ಹನುಮಂತ ಕುಮಾರ್ ಅವರನ್ನು ಅಂದಿನ ಜಿಪಂ ಸಿಇಒ ಡಾ.ಕೆ. ನಂದಿನಿದೇವಿ ಅಮಾನತು ಮಾಡಿ ಆದೇಶ ಕೂಡಾ ಮಾಡಿದ್ದರು.
ಒಂದೇ ತಿಂಗಳ ಅದೇ ಹುದ್ದೆಗೆ ಸೇರಿದ ಹನುಮಂತ ಕುಮಾರ್:ಪಿಡಿಒ ಹನುಮಂತ ಕುಮಾರ್ ಅವರನ್ನು ಕರ್ತವ್ಯ ಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಸಸ್ಪೆಂಡ್ ಆಗಿ ಒಂದೇ ತಿಂಗಳಿಗೆ ಮತ್ತೆ ಅದೇ ಗ್ರಾಪಂ ಕಚೇರಿಗೆ ವಿಚಾರಣೆಯನ್ನು ಕಾಯ್ದಿರಿಸಿ ದಿನಾಂಕ 25-10-2022ರಂದು ಅಮಾನತನ್ನು ತೆರವುಗೊಳಿಸಿದ್ದರು. ಬೇಡರಡ್ಡಿಹಳ್ಳಿ ಗ್ರಾಪಂ ಕಚೇರಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿತ್ತು ಮತ್ತು ಕೂಡಲೇ ನೌಕರ ಕರ್ತವ್ಯಕ್ಕೆ ಹಾಜರಿಯಾಗುವಂತೆ ಜಿಪಂ ಸಿಇಒ ಡಾ.ಕೆ. ನಂದಿನಿದೇವಿ ಅಮಾನತು ಆದೇಶ ಹಿಂಪಡೆದಿದ್ದರು. ಮತ್ತೇ ಅದೇ ಕಚೇರಿಗೆ ನೇಮಕ ಮಾಡಿ ಆದೇಶವೂ ಆಗಿತ್ತು. ಇದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.