ಕರ್ನಾಟಕ

karnataka

ETV Bharat / state

ಗೊಲ್ಲರಹಟ್ಟಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರಲು ಸರ್ಕಾರಗಳೇ ಕಾರಣ: ಸಿದ್ದೇಶ್ ಯಾದವ್ - lastest untouchability news

ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸಿದ್ದು, ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಗೊಲ್ಲ ಸಮುದಾಯದ ಮೌಢ್ಯ ಆಚರಣೆಯಿಂದಲೇ ಇಂತಹ ಘಟನೆ ನಡೆದಿದೆ. ಸರ್ಕಾರ ಕೂಡಾ ಇಂಥ ಬೆಳವಣಿಗೆ ನಡೆಯಲು ಕಾರಣವೆಂದರು.

ಸಿದ್ದೇಶ್ ಯಾದವ್

By

Published : Sep 17, 2019, 9:57 PM IST

ಚಿತ್ರದುರ್ಗ:ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸಿದ್ದು, ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ.

ಗೊಲ್ಲರಹಟ್ಟಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರಲು ಸರ್ಕಾರಗಳೇ ಕಾರಣ : ಸಿದ್ದೇಶ್ ಯಾದವ್

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಂಸದರಿಗೆ ಪ್ರವೇಶ ನಿರಾಕರಣೆಯನ್ನು ಖಂಡಿಸಿದ ಸಿದ್ದೇಶ್ ಯಾದವ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ರು. ಸಂಸದರಿಗೆ ಆಗಿರುವ ಅವಮಾನಕ್ಕೆ ವಿಷಾಧವಿದೆ. ಜೊತೆಗೆ ನಾಳೆ ನಾಡಿದ್ದು ಆ ಗ್ರಾಮಕ್ಕೆ ನಿಯೋಗ ತೆರಳಿ ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆಂದು ಭರವಸೆ ನೀಡಿದರು.

ಗೊಲ್ಲ ಸಮುದಾಯ ಈಗಲೂ ಮೌಢ್ಯತೆ ಆಚರಿಸಿಕೊಂಡು ಬರುತ್ತಿದೆ. ಸಮುದಾಯದ ಜನರಿಗೆ ಅಕ್ಷರಜ್ಞಾನವಿಲ್ಲ. ಅವರು ಬೇರೆಯವರ ಜೊತೆ ಬೆರೆತಿಲ್ಲ, ವಿಚಾರ ಜ್ಞಾನವಿಲ್ಲ. ಹಾಗಾಗಿ ಇಂತಹ ಘಟನೆ ನಡೆದಿದೆ. ಸರ್ಕಾರಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಮಠಾಧೀಶರು ಜನ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕಿತ್ತು. ಆದರೆ ಅಂತಹ ಕೆಲಸವನ್ನು ಯಾರೂ ಸಹ ಮಾಡಿಲ್ಲವೆಂದು ಸರ್ಕಾರದ ಕಡೆ ಬೆರಳು ಮಾಡಿ ತೋರಿಸಿದರು.

ABOUT THE AUTHOR

...view details