ಚಿತ್ರದುರ್ಗ:ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಲಾರಿ ಚಾಲಕನ ದೇಹದಿಂದ ರುಂಡ ಬೇರ್ಪಟ್ಟ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
ಸಿಮೆಂಟ್ ತುಂಬಿದ್ದ ಲಾರಿ ಬಳ್ಳಾರಿ ಕಡೆಯಿಂದ ಬೆಂಗಳೂರು ಕಡೆ ಹೊರಟಿತ್ತು. ಈ ವೇಳೆ ಹುಣಸೆಹಣ್ಣು ತುಂಬಿಕೊಂಡು ಬಳ್ಳಾರಿ ಕಡೆ ಹೊರಟಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಬೇರ್ಪಟ್ಟ ಚಾಲಕನ ರುಂಡ, ಮುಂಡ ಇದನ್ನೂ ಓದಿ:ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಕ್ರಿಕೆಟ್ ಸ್ಟಂಪ್ನಿಂದ ಮಾರಣಾಂತಿಕ ಹಲ್ಲೆ
ಸಿಮೆಂಟ್ ತುಂಬಿದ್ದ ಲಾರಿ ಚಾಲಕ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಜಗದೀಶ (28) ಸ್ಥಳದಲ್ಲೇ ಸಾವನ್ನಪಿದ್ದಾನೆ. ಹುಣಸೆಹಣ್ಣು ತುಂಬಿದ್ದ ಲಾರಿ ಚಾಲಕ ಅರೋಕ್ಯಾಸ್ವಾಮಿ (55) ತಮಿಳುನಾಡಿನವರಾಗಿದ್ದು, ಗಂಭೀರವಾಗಿ ಗಾಯಗೊಂಡ ಪರಿಣಾಮ ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಇನ್ಸ್ಪೆಕ್ಟರ್ ಜೆ.ಎಸ್. ತಿಪ್ಪೆಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.