ಚಿತ್ರದುರ್ಗ: ಎರಡನೇ ಹಂತದ ಪರಿಹಾರ ಧನ ಬರಲ್ಲ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಏನು ದೇಶದ ಪ್ರಧಾನಿಯೇ ಎಂದು ಪ್ರಶ್ನಿಸಿದ್ದಾರೆ.
2ನೇ ಹಂತದ ಪರಿಹಾರ ಧನ ಬರಲ್ಲ ಎನ್ನಲು ಹೆಚ್‌ಡಿಕೆ ಏನು ದೇಶದ ಪ್ರಧಾನಿನಾ.. ಬಿಎಸ್ವೈ ಕಿಡಿ
ಎರಡನೇ ಹಂತದ ಪರಿಹಾರ ಧನ ಬರಲ್ಲ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಅತಿವೃಷ್ಟಿಯಿಂದ ಜನರ ಬದುಕು ಮೂರಬಟ್ಟೆಯಾಗಿದೆ. ಎರಡನೇ ಹಂತದ ಪರಿಹಾರ ಧನ ಬರಲ್ಲ ಎನ್ನಲು ಕುಮಾರಸ್ವಾಮಿ ಏನೂ ಈ ದೇಶದ ಪ್ರಧಾನಿ ನಾ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸಿದರು. ಚಿತ್ರದುರ್ಗದ ಶ್ರೀಮುರುಘಾಮಠಕ್ಕೆ ತೆರಳುವ ಮುನ್ನ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಜವಾಬ್ದಾರಿ ತನದಿಂದ ಮಾತನಾಡಬಾರದು. ಅವರೊಬ್ಬರು ಮಾಜಿ ಮುಖ್ಯಮಂತ್ರಿ. ಈ ರೀತಿ ಮಾತನಾಡಿದ್ರೆ ಬೆಲೆ ಇರಲ್ಲ. ಎರಡನೇ ಹಂತದ ಪರಿಹಾರ ಧನ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆಯೇ ಹೊರೆತು ಕುಮಾರಸ್ವಾಮಿಯವರಲ್ಲ ಎಂದು ಮಾಜಿ ಮುಖ್ಯಮಂತ್ರಿ ವಿರುದ್ಧ ಬಿಎಸ್ವೈ ಆಕ್ರೋಶ ಹೊರಹಾಕಿದರು.
ಇನ್ನು, ನೆರೆ ಸಂತ್ರಸ್ತರ ನಿಧಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಿಂದ 1200 ಕೋಟಿ ಮೊದಲನೆ ಕಂತು ನೆರೆ ಪರಿಹಾರ ಬಂದಿದ್ದು, ಎರಡನೇ ಹಂತದ ಪರಿಹರ ಧನ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬರುತ್ತದೆ. ಅ ಹಣದಿಂದ ರೈತರ ಬೆಳೆ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಬೇಕಾಗುವ ಸೌಲಭ್ಯವನ್ನು ನಮ್ಮ ಸರ್ಕಾರದಿಂದ ನೀಡುತ್ತೇವೆ ಎಂದರು.