ಕರ್ನಾಟಕ

karnataka

ETV Bharat / state

ಮಳೆ ಬಂದಿದೆ, ಏನಮ್ಮ ಬಿತ್ತನೇ ಮಾಡಿದ್ದೀರಾ: ರೈತ‌ ಮಹಿಳೆಗೆ ಸಿಎಂ ಯಡಿಯೂರಪ್ಪ ಪ್ರಶ್ನೆ - ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ

ಲಾಕ್​ಡೌನ್​ ಸಂದರ್ಭದಲ್ಲಿ ಈರುಳ್ಳಿ ಕೊಳೆತು ಹೋಗುತ್ತಿದೆ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ರೈತ ಮಹಿಳೆಯೊಂದಿಗೆ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರು ವಿಡಿಯೋ ಸಂವಾದದಲ್ಲಿ ಮಾತನಾಡಿದರು.

cm-yeddyurappa-questions-the-farmer-woman
ರೈತ‌ ಮಹಿಳೆಗೆ ಸಿಎಂ ಯಡಿಯೂರಪ್ಪ ಪ್ರಶ್ನೆ

By

Published : Jul 27, 2020, 9:53 PM IST

Updated : Jul 27, 2020, 10:06 PM IST

ಚಿತ್ರದುರ್ಗ:ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತ ಕುಮಾರಿ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾತನಾಡಿ, 'ಏನಮ್ಮ ಮಳೆ ಬಂದಿದೆ, ಬಿತ್ತನೆ ಮಾಡಿದ್ದೀರಾ' ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.

ಕೊರೊನಾ ನಿಯಂತ್ರಿಸುವ ಸಲುವಾಗಿ ಘೋಷಣೆ ಮಾಡಿದ್ದ ಲಾಕ್​​​​ಡೌನ್​​ನಿಂದಾಗಿ ಈರುಳ್ಳಿ ಸರಿಯಾದ ಬೆಲೆಗೆ ಖರೀದಿಸದ ಕಾರಣ ಇಡೀ ಈರುಳ್ಳಿ ಕೊಳೆತು ಹೋಗುತ್ತಿದೆ ಎಂದು ವಿಡಿಯೋ ಮೂಲಕ ಇದೇ ರೈತ ಮಹಿಳೆ ಅಳಲು ತೋಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ ವಿಡಿಯೋ ಗಮನಿಸಿ 'ನೀವೇ ದೂರವಾಣಿ ಮೂಲಕ ಕರೆ ಮಾಡಿ. ಸಮಸ್ಯೆ ಆಲಿಸಿದ್ದೀರಾ. ಇಡೀ ಈರುಳ್ಳಿ ಮಾರಾಟ ಆಗುವಂತೆ ಮಾಡಿದ್ದೀರಿ. ನೀವು ನಿಜವಾಗಲೂ ರೈತ ನಾಯಕನೇ' ಎಂದು ಮಹಿಳೆ ಧನ್ಯವಾದ ತಿಳಿಸಿದರು. ಹಿರಿಯೂರು ತಾಲೂಕಿನಲ್ಲಿ ನೀರಾವರಿ ಸಮಸ್ಯೆ ಎದುರಾಗಿದೆ. ಅದನ್ನು ಬಗಿಹರಿಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರಕ್ರಿಯಿಸಿದ ಸಿಎಂ, 'ಮಳೆ ಬಂದಿದೆಯೇನಮ್ಮ, ಬಿತ್ತನೆ ಮಾಡಿದ್ದೀರಾ? ನೀರಾವರಿ ಸಮಸ್ಯೆಯನ್ನು ಬಗೆಹರಿಸುವೆ' ಎಂದು ಭರವಸೆ ನೀಡಿದರು.

Last Updated : Jul 27, 2020, 10:06 PM IST

ABOUT THE AUTHOR

...view details