ಚಿತ್ರದುರ್ಗ:ಸಚಿವ ಎಂಟಿಬಿ ನಾಗರಾಜ ಸುದ್ದಿಗೋಷ್ಠಿ ವಿಚಾರವಾಗಿ ಕುರುಬ ಸಂಘದ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ.
ನಗರದ ಕಾಗಿನೆಲೆಯಿಂದ ಬೆಂಗಳೂರಿಗೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಸಚಿವ ಎಂಟಿಬಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ, ಎಂಎಲ್‌ಸಿ ರೇವಣ್ಣ, ಕುರುಬ ಸಮಾಜದ ಮುಖಂಡ ಮುಕುಡಪ್ಪ ಕೂಡ ಉಪಸ್ಥಿತರಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಕುರುಬ ಸಂಘಟನೆಗಳ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಜನರ ಮಧ್ಯೆ ವಾಗ್ವಾದ ನಡೆದಿದೆ. ಎಂಎಲ್‌ಸಿ ರೇವಣ್ಣ ಸಮ್ಮುಖದಲ್ಲೇ ಕುರುಬ ಸಂಘಟನೆ ಮುಖಂಡರಾದ ಮಲ್ಲಿಕಾರ್ಜುನ ಮತ್ತು ಮಂಜಪ್ಪ ನಡುವೆ ವಾಗ್ವಾದ ನಡೆಸಿದ್ದಾರೆ.