ಚಿತ್ರದುರ್ಗ:ದೇಗುಲ ವಿಚಾರದಲ್ಲಿ ಹಳೇ ದ್ವೇಷ ಹಿನ್ನೆಲೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದು ನಾಲ್ಕಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹಾಲಮಾದೇನಹಳ್ಳಿಯಲ್ಲಿ ಘಟನೆ ನಡೆದಿದೆ.
ಕೊರೊನಾ, ಸಾಮಾಜಿಕ ಅಂತರ ಮರೆತು ಹಿರಿಯೂರಲ್ಲಿ ಮಾರಾಮಾರಿ - ಹಾಲಮಾದೇನಹಳ್ಳಿ ಗಲಾಟೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಾಲಮಾದೇನಹಳ್ಳಿಯಲ್ಲಿ ದೇಗುಲ ವಿಚಾರದಲ್ಲಿ ಹಳೇ ದ್ವೇಷ ಹಿನ್ನೆಲೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ.
ಹಳೇ ದ್ವೇಷ ಹಿನ್ನೆಲೆ ಹಿರಿಯೂರಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ
ಭೂತಪ್ಪನ ದೇಗುಲ ವಿಚಾರದಲ್ಲಿ ಎರಡು ಗುಂಪಿನ ನಡುವೆ ದ್ವೇಷ ಏರ್ಪಟ್ಟು ಕೊನೆಗೆ ಘರ್ಷಣೆಗೆ ಕಾರಣವಾಗಿದೆ. ಹಾಲಮಾದೇನಹಳ್ಳಿಯ ಜಯಪ್ಪ ಮತ್ತು ಮುನಿಯಪ್ಪ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಕೋಲು, ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಬಡಿದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ 4ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.
ಹಳೇ ದ್ವೇಷ ಹಿನ್ನೆಲೆ ಹಿರಿಯೂರಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ
ಗಾಯಾಳುಗಳನ್ನು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.