ಚಿತ್ರದುರ್ಗ: ಮಾರಮ್ಮ ಹಬ್ಬದಲ್ಲಿ ಕುರಿ ಕಡಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮುತ್ತಯ್ಯನ ಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಾರಮ್ಮನ ಜಾತ್ರೆಯಲ್ಲಿ ಮಾರಾಮಾರಿ..ಕುರಿ ಕಡಿಯುವ ವಿಚಾರಕ್ಕೆ ಗುಂಪುಗಳು ನಡುವೆ ಗಲಾಟೆ - ಚಳ್ಳಕೆರೆ ತಾಲೂಕು
ಮಾರಮ್ಮನ ಜಾತ್ರೆಯಲ್ಲಿ ಕುರಿ ಕಡಿಯುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹಲವರು ಗಾಯಗೊಂಡಿದ್ದಾರೆ.
ಕುರಿಕಡಿಯುವ ವಿಚಾರಕ್ಕೆ ಗುಂಪುಗಳು ನಡುವೆ ಗಲಾಟೆ
ಸೇವಾಲಾಲ್ ಹಾಗೂ ಮಾರಮ್ಮ ದೇವಾಸ್ಥಾನಗಳು ಎರಡೂ ಅಕ್ಕಪಕ್ಕ ಇರುವುದರಿಂದ ಮಾರಮ್ಮ ಹಬ್ಬದ ನಿಮ್ಮಿತ್ತ ಕುರಿ ಕಡಿಯುವಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಬಳಿಕ ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.