ಕರ್ನಾಟಕ

karnataka

ETV Bharat / state

ಹೊಸದುರ್ಗ: ಪುರಸಭೆ ಮುಂಭಾಗ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ!

ಕಚೇರಿಗೆ ಬಳಿ ಬಂದು ಮಂಜುನಾಥ್ ಕರ್ತವ್ಯಕ್ಕೆ ನೇಮಿಸಿಕೊಳ್ಳಿ ಎಂದು ಅಧಿಕಾರಿಗಳಲ್ಲಿ ಕೇಳಿದ್ದಾರೆ. ಆಗ ಅಧಿಕಾರಿಗಳು ನೀವು ಬೂಸ್ಟರ್​ ಡೋಸ್​​ ಲಸಿಕೆ ಹಾಕಿಸಿಕೊಂಡು ಬರಲು ಹೇಳಿದ್ದಾರೆ..

civilian worker try to commit suicide at chitradurga
ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ

By

Published : Feb 2, 2022, 3:17 PM IST

ಚಿತ್ರದುರ್ಗ: ಕರ್ತವ್ಯಕ್ಕೆ ಸೇರಿಸಿಕೊಳ್ಳದಿರುವ ಹಿನ್ನೆಲೆ ಪೌರ ಕಾರ್ಮಿಕನೋರ್ವ ಪುರಸಭೆ ಮುಂಭಾಗ ಪೆಟ್ರೋಲ್​​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.

ಮಂಜುನಾಥ್ ಐದು ವರ್ಷಗಳ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಕಳೆದ ವರ್ಷ 199 ದಿನ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ತಿಳುವಳಿಕೆ ಪತ್ರ ಕೂಡ ಕಳುಹಿಸಲಾಗಿತ್ತು. ಅಲ್ಲದೇ ಮದ್ಯ ಕುಡಿದು ಕಚೇರಿಗೆ ಬಂದು ಮೇಲಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರ್ವೇ ಸಾಮಾನ್ಯವಾಗಿತ್ತು ಎನ್ನಲಾಗಿದೆ.

ಕಚೇರಿಗೆ ಬಳಿ ಬಂದು ಮಂಜುನಾಥ್ ಕರ್ತವ್ಯಕ್ಕೆ ನೇಮಿಸಿಕೊಳ್ಳಿ ಎಂದು ಅಧಿಕಾರಿಗಳಲ್ಲಿ ಕೇಳಿದ್ದಾರೆ. ಆಗ ಅಧಿಕಾರಿಗಳು ನೀವು ಬೂಸ್ಟರ್​ ಡೋಸ್​​ ಲಸಿಕೆ ಹಾಕಿಸಿಕೊಂಡು ಬರಲು ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ

ಆದರೆ, ಪೆಟ್ರೋಲ್​​ ಸಮೇತ ಬಂದಿದ್ದ ಮಂಜುನಾಥ್ ಇಂದೇ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತೇನೆಂದು ಹೇಳಿ, ಕೂಡಲೇ ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:ಜೀವಂತ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ - ವಿಡಿಯೋ ವೈರಲ್

ತಕ್ಷಣ ಅಲ್ಲಿದ್ದ ಜನರು ಬಂದು ಬೆಂಕಿ ಹಾರಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details