ಕರ್ನಾಟಕ

karnataka

ETV Bharat / state

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಪೌರ ಕಾರ್ಮಿಕ ಸಾವು - ಚಿತ್ರದುರ್ಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪೌರ ಕಾರ್ಮಿಕ ಸಾವು

ಜಿಲ್ಲೆಯ ಹೊಸದುರ್ಗ ಪುರಸಭೆಯಲ್ಲಿ 5 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಮೃತ ಕಾರ್ಮಿಕ. ಈತ 2021ನೇ ಸಾಲಿನಲ್ಲಿ 199 ದಿನ ಕರ್ತವ್ಯಕ್ಕೆ ಗೈರಾಗಿದ್ದರು. 2021ರ ಜೂನ್ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದರು..

Civilian worker died who have tried to suicide in Chitradurga
ಚಿತ್ರದುರ್ಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪೌರ ಕಾರ್ಮಿಕ ಸಾವು

By

Published : Feb 5, 2022, 9:15 PM IST

ಚಿತ್ರದುರ್ಗ :ಕರ್ತವ್ಯಕ್ಕೆ ಸೇರಿಸಿಕೊಳ್ಳದಿರುವ ಕಾರಣ ಒಡ್ಡಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪೌರಕಾರ್ಮಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲೆಯ ಹೊಸದುರ್ಗ ಪುರಸಭೆಯಲ್ಲಿ 5 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಮೃತ ಕಾರ್ಮಿಕ. ಈತ 2021ನೇ ಸಾಲಿನಲ್ಲಿ 199 ದಿನ ಕರ್ತವ್ಯಕ್ಕೆ ಗೈರಾಗಿದ್ದರು. 2021ರ ಜೂನ್ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದರು.

ಅವರನ್ನು ಕಚೇರಿಗೆ ಕರೆದು ಎಚ್ಚರಿಕೆ ನೋಟಿಸ್‌ ನೀಡಲಾಗಿತ್ತು. ಅಲ್ಲದೆ ಮದ್ಯಪಾನ ಮಾಡಿ ಕಚೇರಿಗೆ ಬಂದು ಮೇಲಾಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು ಎಂಬ ಆರೋಪ ಇತ್ತು.

ಮೃತ ಪೌರ ಕಾರ್ಮಿಕ

ಅಧಿಕಾರಿಗಳು ಕೊರೊನಾ 3ನೇ ಅಲೆ ಇರುವ ಹಿನ್ನೆಲೆ ಕೋವಿಡ್ ಬೂಸ್ಟರ್‌ ಡೋಸ್‌ ಹಾಕಿಕೊಂಡು ಬಂದರೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಮೇಲಧಿಕಾರಿ ಹೇಳಿದ್ದಾರೆ.

ಇದಕ್ಕೆ ಜಗ್ಗದ ಮಂಜುನಾಥ್, ಮಂಗಳವಾರ ನೀವು ನನ್ನನ್ನು ಇಂದು ಕೆಲಸಕ್ಕೆ ತೆಗೆದುಕೊಳ್ಳಲೇಬೇಕು ಎನ್ನುತ್ತಾ ಕೈಯಲ್ಲಿದ್ದ ‍ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನು.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅವರಿಗೆ ವಿವಾಹವಾಗಿತ್ತು. 6 ತಿಂಗಳ ಹಿಂದೆ ಮನೆಯಲ್ಲೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸದುರ್ಗ: ಪುರಸಭೆ ಮುಂಭಾಗ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ!

For All Latest Updates

TAGGED:

ABOUT THE AUTHOR

...view details